ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ..! ಕೊನೆಯ ದಿನಾಂಕ ಯಾವಾಗ ಗೊತ್ತಾ..?
ಇಂಡಿ : 2024-25 ನೇ ಶೈಕ್ಷಣಿಕ ಸಾಲಿನಲ್ಲಿ ಯುಜಿಸಿ ಅನುಮೋದಿತ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ವಿವಿಧ ಕೋರ್ಸಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಎಲ್.ಐ.ಸಿ, ಎಂ.ಎ,ಎಂ.ಎಸ್.ಡಬ್ಲ್ಯೂ, ಎಂ.ಕಾಂ,ಎಂ.ಸಿ.ಎ
ಹಾಗೂ ಸ್ನಾತಕೋತ್ತರ, ಸ್ನಾತಕಪೂರ್ವ ಮತ್ತು ಡಿಪ್ಲೋಮಾ ಸರ್ಟಿಫಿಕೆಟ್ ಕೇಟ್ ಕೋರ್ಸ್‌ಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಕೊನೆಯ ದಿನಾಂಕ ನವೆಂಬರ್ 15 ಆಗಿರುತ್ತದೆ. ಮಾಹಿತಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕಲಿಕಾರ್ಥಿ ಸಹಾಯ ಕೇಂದ್ರ, ಬೋಳೆಗಾಂವ ರೋಡ, ಸಿದ್ದಲಿಂಗೆಶ್ವರ ಕಾಲೋನಿ 9731549997, 8495935489 ಸಂಪರ್ಕಿಸಬಹುದು ಎಂದು ಸಂಯೋಜಕ ಎಸ್. ಬಿ ಕೆಂಬೋಗಿ ತಿಳಿಸಿದ್ದಾರೆ.