ಇಂಡಿಯಲ್ಲಿ ಹೊಸಪೇಟೆ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಸಂಸದ ರಮೇಶ್ ಗೆ ಮನವಿ
ಇಂಡಿ: ಹೊಸಪೇಟೆ ಎಕ್ಸ್‌ಪ್ರೆಸ್ ರೈಲು ಇಂಡಿ ರೈಲು ನಿಲ್ದಾಣದಲ್ಲಿ ನಿಲ್ಲಿಸಲು ಸಂಸದ ರಮೇಶ್ ಜಿಗಜಿಣಿಗಿ ಅವರಿಗೆ ಬಿಜೆಪಿ ಮುಖಂಡ ರಾಮಸಿಂಗ್ ಕನ್ನೊಳ್ಳಿ ನೇತೃತ್ವದಲ್ಲಿ ಮುಖಂಡರು ಮನವಿ ಸಲ್ಲಿಸಿದರು.
ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನೂತನ ಸಂಸದರಿಗೆ ಸನ್ಮಾನ ಹಾಗೂ ಬಿಜೆಪಿ ಕಾರ್ಯಾಕಾರಣಿ ಸಭೆಯಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಮಸಿಂಗ್ ಕನ್ನೊಳ್ಳಿ ಮಾತನಾಡಿ, ಈ ಬಾಗದಲ್ಲಿ ರೈಲು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಿದ್ದು, ವಿವಿಧ ಚಟುವಟಿಕೆಗಳಾಗಿ ರೈಲನ್ನು ನಂಬಿಕೊಂಡಿದ್ದಾರೆ.ಅದಲ್ಲದೆ ಚಡಚಣ, ಇಂಡಿ, ಸಿಂದಗಿ , ಆಲಮೇಲ ಭಾಗದ ಜನರು ಆಗಮಿಸಿ ಈ ರೈಲು ಮೂಲಕ ಪ್ರಯಾಣ ಬೆಳೆಸುತ್ತಾರೆ. ಹಾಗಾಗಿ ಈ ಬಾಗದ ಜನರ ಹಿತದೃಷ್ಟಿಯಿಂದ ಹೊಸಪೇಟೆ ಎಕ್ಸ್‌ಪ್ರೆಸ್ ರೈಲು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿ ವಿ ನಾಡಗೌಡ, ಮಹೇಶ ಕಲ್ಯಾಣಿ, ಎಸ್ ಎಮ್ ಕಕ್ಕಳಮೇಲಿ,ವಿರೇಶ ಹತ್ತೂರಮಠ, ಸಂತೋಷ ಹೂಗಾರ,ರಾಚು ಬಡಿಗೇರ,ಜೆಟ್ಟಪ್ಪ ಮರಡಿ, ವಿ ಸಿ ಪಾಟೀಲ, ವಿ ಎಸ್ ಕುಡಿಗನೂರ ಇನ್ನೂ ಅನೇಕರು ಉಪಸ್ಥಿತರಿದ್ದರು.