ಅಫಜಲಪುರ: ಕರ್ನಾಟಕ ಜನ ಬೆಂಬಲ ವೇದಿಕೆ ತಾಲೂಕ ಘಟಕ ಅಫಜಲಪುರ ವತಿಯಿಂದ ಪಟ್ಟಣದ ವಿವಿಧ ಸಮಸ್ಯೆಗಳ ಕುರಿತು ಹಾಗೂ ಚಿಣಮಗೇರಿ ಗ್ರಾಮದ ಮಹಾಂತಮ್ಮ ತಳವಾರ ಎಂಬ 8 ವರ್ಷದ ವಿದ್ಯಾರ್ಥಿನಿ ಸಾಂಬಾರ ಪಾತ್ರೆಯಲ್ಲಿ ಬಿದ್ದು ಸಾವನ್ನಪ್ಪಿದ್ದು, ಆ ಬಾಲಕಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ಧನ ಸಹಾಯ ನೀಡಬೇಕು. ಮತ್ತು ಆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿಗೆ ತೆಗೆದುಕೊಳ್ಳಬೇಕು ಎಂದು ತಾಲೂಕ ದಂಡಾಧಿಕಾರಿಗಳ ಮುಂಖಾತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಂದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಉಮೇಶ ಅಂದೋಡಗಿ ಕರಜಗಿ ವಲಯ ಅಧ್ಯಕ್ಷರಾದ ಖಾಜು ಹೊಸಮನಿ ತಾಲೂಕ ಉಪಾಧ್ಯಕ್ಷರಾದ ಸಾಗರ್ ಸಂಗೋಳ್ಳಗಿ ಕರಜಗಿ ವಲಯ ಉಪಧ್ಯಕ್ಷರಾದ ಪುಣ್ಯವಂತ ಚಾಂಬರ ಅನಿಲ್ ಗಾದಿವಡ್ಡರ ಇನ್ನಿತ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.