ಕಳಪೆ ಕಾಮಗಾರಿ ಶೀಘ್ರ ಪರಿಹಾರ ನೀಡುವಂತೆ ಮನವಿ
ಕಳಪೆ ಕಾಮಗಾರಿ ಶೀಘ್ರ ಪರಿಹಾರ ನೀಡುವಂತೆ ಕೆ.ಬಿ.ಜೆ.ಎನ್.ಎಲ್ ಎಸ್.ಇ ಗೆ ಮನವಿ
೬ ವರ್ಷಗಳು ಕಳೆದರು ಪರಿಹಾರ ಬಾರದೇ ಹೋಲದಲ್ಲಿ ನೀರು ನಿಂತು ನಷ್ಟ ಅನುಭವಿಸುತ್ತಿರುವ ರೈತ ಮಂಜುನಾಥ ತಳವಾರ
ನಿಡಗುಂದಿ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸೋಮನಾಳ ಗ್ರಾಮದ ರೈತರಾದ ಮಂಜುನಾಥ ತಳವಾರ ಸರ್ವೇ ನಂಬರ ೧೬೩/೩ ರ ಜಮೀನಿನಲಿ ್ಲಮುಳವಾಡ ಏತನೀರಾವರಿ ಯೋಜನೆಯಡಿ ವಡವಡಗಿ ಕೆರೆ ನೀರು ತುಂಬುವ ಕಾಮಗಾರಿಗೆ ಸಂಬAಧಿಸಿದAತೆ ಈ ರೈತರಿಗೆ ಭೂ ಪರಿಹಾರ ಹಾಗೂ ಇಲ್ಲಿಯವರೆಗೆ ಆಗಿರುವ ನಷ್ಟ ಒದಗಿಸುವುದು ಹಾಗೂ ಈ ನಷ್ಟಕ್ಕೆ ಕಾರಣರಾದ ಇಲಾಖೆ ಅಧಿಕಾರಿಗಳನ್ನ ವಜಾ ಗೊಳಿಸುವುದು ಮತ್ತು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆ.ಬಿ.ಜೆ.ಎನ್.ಎಲ್‌ನ ಮುಖ್ಯ ಅಭಿಯಂತರರಾದ ಡಿ ಬಸವರಾಜ ಹಾಗೂ ಡಿ.ಸಿ ಆದಂತಹ ಆಯ್.ಎಲ್.ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ ತಮ್ಮ ಇಲಾಖೆಯ ವತಿಯಿಂದ ಮಾಡಿರುವ ಮುಳವಾಡ ಏತನೀರಾವರಿ ಯೋಜನೆಯಡಿ ವಡವಡಗಿ ಕೆರೆ ನೀರು ತುಂಬುವ ಕಾಮಗಾರಿಗೆ ಸಂಬAಧಿಸಿದAತೆ ಕಾಮಗಾರಿಯೂ ಸಂಪೂರ್ಣ ಮಾಡದೇಗುತ್ತಿಗೆದಾರರು ಬಿಲ್ ಸಂದಾಯ ಮಾಡಿಕೊಂಡಿರುತ್ತಾರೆ, ಇದಕ್ಕೆ ಇಲಾಖೆಯ ಅಧಿಕಾರಿಗಳು ಶಾಮಿಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ನಷ್ಟಗೊಂಡ ರೈತರಿಗೆ ಇಲ್ಲಿಯವರೆಗೆ ಯಾವುದೇ ಭೂ ಪರಿಹಾರ ನೀಡಿರುವುದಿಲ್ಲ, ೧೯೭೨ ರಿಂದ ಜಮೀನಿನಲ್ಲಿ ವಿದ್ಯುತ್ ಸಂಪರ್ಕಇದ್ದುಒಟ್ಟಾರೆ ೬೩೮ ದಾಳಿಂಬೆ ಇದ್ದು ಒಂದು ಬಾವಿ, ಒಂದು ಬೊರವೆಲ್‌ಇದ್ದು ೫೦ ವರ್ಷಗಳಿಂದ ತೋಟ ಮಾಡುತ್ತಿದ್ದರು ಗಣನೆಗೆ ತೆಗೆದುಕೊಳ್ಳದೇ ಅವುಗಳನ್ನು ಪ್ರಭಾವಿಗಳನ್ನು ಕೈವಾಡದಿಂದರೈತರಿಗೆ ನಷ್ಟ ಉಂಟಾಗುವAತೆ ಅಧಿಕಾರಿಗಳು ಮಾಡಿದ್ದಾರೆ
ಕೂಡಲೇಕಾಮಗಾರಿಗೆ ಸಂಬAಧಿಸಿದAತೆ ಕಳಪೆ ಮಾಡಿರುವ ಗುತ್ತಿಗೆದಾರರ£ ಪ್ಪುಪಟ್ಟಿಗೆ ಸೇರಿಸಬೇಕು, ಎಲ್ಲವೂ ಸರಿ ಇದೆ ಎಂದು ಕಾಮಗಾರಿಯ ಬಿಲ್ ಮಾಡಿರುವ ಇಲಾಖೆ ಅಧಿಕಾರಿಗಳನ್ನ ವಜಾ ಗೊಳಿಸಬೇಕು ಇಲ್ಲವಾದಲ್ಲಿ ಒಂದು ವಾರದ ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಲಿಮಟ್ಟಿಯ ಕೆ.ಬಿ.ಜೆ.ಎನ್.ಎಲ್ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕಲಾಗುವುದು ಎಂದು ಈ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ , ನಿಡಗುಂದಿ ತಾಲೂಕಾ ಅಧ್ಯಕ್ಷರಾದ ಡಾ.ಕೆ. ಎಂ ಗುಡ್ನಾಳ , ಮುಖಂಡರಾದ ತಿಪ್ಪಣ್ಣ ನಾಟಿಕಾರ, ಮೋತಿಲಾಲ ಉಣ್ಣಿಬಾಯಿ, ದಾನಪ್ಪ ಗದ್ಯಾಳ, ಮಂಜುನಾಥ ನಾಟಿಕಾರ, ಬುಡ್ಡೆಸಾಬ ಡವಳಗಿ, ಮೋದಿನಸಾಬ ಭಾಗವಾನ, ಕಲ್ಲಪ್ಪ ಅಫಜಲಪುರ ಸೇರಿದಂತೆ ಇತರರು ಇದ್ದರು.



















