ಮುದ್ದೇಬಿಹಾಳ : ಮುದ್ದೇಬಿಹಾಳ ತಾಲ್ಲೂಕಿನ ಆಲೂರ ಕೇಸಾಪೂರ ವ್ಯಾಪ್ತಿಯ ರೈತರ ಜಮೀನಿನಲ್ಲಿ ಮೊಸಳೆ ಕಂಡು ಬಂದ ಹಿನ್ನೆಲೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ
ಶನಿವಾರ ಸಾಯಂಕಾಲ ರೈತ ಅಶೋಕ ಹಗರಗುಂಡ ಅವರ ತೊಗರಿ ಹೊಲದಲ್ಲಿಯ ಕೃಷಿಹೂಂಡದಲ್ಲಿ ಮೊಸಳೆ ಕಂಡಿದೆ ಮೊಸಳೆ ನೋಡುತ್ತಿದ್ದಂತೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು ರಾತ್ರಿ ಕಾರ್ಯಾಚರಣೆ ಬೇಡ ಬೆಳಗ್ಗೆ ಬರುತ್ತೇವೆ ಎಂದು ತಿಳಿಸಿದ್ದಾರೆ.
ರವಿವಾರ ರಾತ್ರಿ ಮಳೆಯಾಗಿದೆ ಬೆಳಗ್ಗೆ ಅಶೋಕ ಹಗರಗೊಂಡ ಕೃಷಿ ಹೊಂಡಕ್ಕೆ ಬಂದಾಗ ಮೊಸಳೆ ಕೃಷಿ ಹೊಂಡದಿಂದ ಹೊರ ಹೋದ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು ಹೆಜ್ಜೆ ಗುರುತು ಹಿಂಬಾಲಿಸಿದಾಗ ಮೊಸಳೆ ಪಕ್ಕದ ಜಿ.ಎಸ್ ಪಾಟೀಲ್ ರ ತೂಗರಿ ಹೊಲದಲ್ಲಿ ಮಲಗಿರೋದು ಕಾಣಿಸಿದೆ ,ನಾಲತವಾಡ ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ ಹೂನ್ನರು ನೇತೃತ್ವದ ತಂಡ ಅಂದಾಜು 8 ಅಡಿ ಉದ್ದ 120 ಕೆಜಿಯ ಬೃಹತ್ ಮೊಸಳೆ ಸರೆ ಹಿಡಿದು ಸುರಕ್ಷಿತವಾಗಿ ನಾರಾಯಣಪುರ ಹಿನ್ನಿರಿಗೆ ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ ಹೂನ್ನುರು ಗಸ್ತುಪಾಲಕರಾದ ವಿಜಯಕುಮಾರ್ ಕಿತ್ತೂರ, ವಿಠ್ಠಲ ಬೋರಟಗಿ ಅರಣ್ಯಪಾಲಕರಾದ ಮುತ್ತು, ಪ್ರಭು ,ಪ್ರಜ್ವಲ್ ,ಮಲ್ಲಪ್ಪ, ಮುದ್ದಪ್ಪ ಪೂಜಾರಿ, ಗ್ರಾಮಸ್ಥರಾದ ಗದ್ದೇಪ್ಪ ಬೋವೇರ,ರಪೀಕ ಹಂಡರಗಲ್ಲ, ಆಸೀಪ್ ತಾಳಿಕೋಟಿ, ಭಾಗವಹಿಸಿದ್ದರು.
ರೈತರ ಆತಂಕ ;ಆಗಾಗ ನಮ್ಮ ಭಾಗದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ ರೈತಾಪಿ ಜನರಾದ ನಾವು ಹೊಲದಲ್ಲಿ ಕಳೆ ಕಸ ತಗೆಯುವಾಗ ಅಥವಾ ಹೊಲ ಬಿತ್ತುವಾಗ ಏಕಾಏಕಿ ನಮ್ಮ ಮೇಲೆ ಮೊಸಳೆ ದಾಳಿ ಮಾಡಿದರೆ ಯಾರು ಹೋಣೆ ಆಗುತ್ತಾರೆ? ಮೊಸಳೆ ಕಣ್ಣಿಗೆ ಕಂಡಾಗ ಅರಣ್ಯ ಇಲಾಖೆಯವರಿಗೆ ಕರೆ ಮಾಡ್ತವೆ ಅವರು ತಕ್ಷಣ ಬರಬೇಕು ಮತ್ತು ಮೊಸಳೆಗಳನ್ನು ಸುರಕ್ಷಿತ ಸ್ಥಳ ಬಿಡುವ ಕೆಲಸ ಆಗಬೇಕು ಮೊಸಳೆ ದಾಳಿ ಮಾಡುವ ಭಯ ಕೃಷ್ಣ ನದಿ ಪಾತ್ರದ ಜನರಲ್ಲಿ ಇದೆ ; ಅಶೋಕ ಹಂಡರಗಲ್ಲ ಕೇಸಾಪೂರ ರೈತ
ಎಚ್ಚರಿಕೆ ನಾಮಫಲಕ ಅಳವಡಿಸಲಾಗುತ್ತದೆ; ಕೃಷ್ಣ ನದಿ ಪಾತ್ರದ ಆಲಮಟ್ಟಿ ನಾರಾಯಣಪುರ ಆಣೆಕಟ್ಟು ಹಿನ್ನಿರಿನ ಪ್ರದೇಶದಲ್ಲಿ ಮೊಸಳೆಗಳು ಕಾಲುವೆಗಳ ಮೂಲಕ ಹಳ್ಳ ಕೃಷಿ ಹೊಂಡ ಸೇರುತ್ತಿವೆ ಹರಿಯುವ ನೀರಿಗಿಂತ ನಿಂತ ನೀರಲ್ಲಿ ಮೊಸಳೆ ಇರುತ್ತವೆ ಹೀಗಾಗಿ ನಿಂತ ನೀರಲ್ಲಿ ಯಾರು ಇಳಿಯಬಾರದು ಮೊಸಳೆ ಕುರಿತು ಕೃಷ್ಣ ನದಿಪಾತ್ರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮ ಅರಣ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಇದೀಗ ಮೊಸಳೆಗಳ ಕುರಿತು ಜಾಗೃತಿ ನಾಮ ಫಲಕ ಹಾಕುತ್ತಿದ್ದೇವೆ ; ಬಸನಗೌಡ ಬಿರಾದಾರ ಉಪ ವಲಯ ಅರಣ್ಯಾಧಿಕಾರಿಗಳು