ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಬಾನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 5 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಎಸ್ ಡಿ ಎಂ ಸಿ ಅಧ್ಯಕ್ಷ ಯಲ್ಲಪ್ಪ ನಾಯಕೋಡಿ ಕಾರ್ಯಕ್ರಮ ಉದ್ಘಾಟಿಸಿದರು ಮುಖಂಡ ಬಸವರಾಜ ಜನ್ನಾ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹಣಮಂತ ನಾವಾಡಿ, ಅಂಜನಾ ಚಿಕ್ಕಮಣೂರ ಮುಖ್ಯಗುರು ಅಲ್ಲಾಭಕ್ಷ ಗೌರ, ಸುಭಾಷ ಚಿಕ್ಕಮಣೂರ ಭೀಮಾಶಂಕರ ಚೋಪಡೆ, ಬಾಷಾ ಮಾಂಗ, ಶಿಕ್ಷಕಿ, ಅಂಬವ್ವ ಚಿಕ್ಕಮಣೂರ, ಅತಿಥಿ ಶಿಕ್ಷಕಿ, ಕವಿತಾ ಶೆಂಡಗೆ ಸೇರಿದಂತೆ ವಿದ್ಯಾರ್ಥಿಗಳಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.