ಪಶುಸಂಗೋಪನೆ-ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ ಅವರ ಜಿಲ್ಲಾ ಪ್ರವಾಸ
ವಿಜಯಪುರ, ಅಕ್ಟೋಬರ್ 18 : ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದ ಕೆ.ವೆಂಕಟೇಶ ಅವರು ಅ.27 ಹಾಗೂ 28 ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅ.27ರಂದು ಮಧ್ಯಾಹ್ನ 1ಗಂಟೆಗೆ ಜಿಲ್ಲೆಯ ಆಲಮಟ್ಟಿಗೆ ಆಗಮಿಸಿ, ಮಧ್ಯಾಹ್ನ 3ರಿಂದ 4-30ರವರೆಗೆ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ವಿಭಾಗದ ಪಶುಸಂಗೋಪನಾ ಇಲಾಖೆ ಹಾಗೂ 4-30ರಿಂದ 5-30ರವರೆಗೆ ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಂದು ಆಲಮಟ್ಟಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಅ.28ರಂದು ಬೆಳಿಗ್ಗೆ 10-30 ಗಂಟೆಗೆ ಆಲಮಟ್ಟಿಯಿಂದ ಹೊರಟು 11 ಗಂಟೆಗೆ ಮುತ್ತಗಿಯಲ್ಲಿ ಖಿಲಾರಿ ತಳಿ ಸಂವರ್ಧನಾ ಕ್ಷೇತ್ರ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆದಾರೆ. ಮಧ್ಯಾಹ್ನ 1 ಗಂಟೆಗೆ ಮುತ್ತಗಿಯಿಂದ ಹೊರಟು 1-30ಕ್ಕೆ ಆಲಮಟ್ಟಿ ಪ್ರವಾಸಿ ಮಂದಿರಕ್ಕೆ ಆಗಮಿಸಿ, ಮಧ್ಯಾಹ್ನ 3-30ಕ್ಕೆ ಆಲಮಟ್ಟಿಯಿಂದ ಹೊರಟು ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.



















