ಆನೆಕಾಲು ರೋಗವು ಪೈಲೇರಿಯಾ ಸೊಂಕುವುಳ್ಳ ಕ್ಯೂಲೆಕ್ಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ,ನಾವು ವಾಸಿಸುವ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ
ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಆಲೂರ: ಆನೆಕಾಲು ರೋಗವು ಪೈಲೇರಿಯಾ ಸೊಂಕುವುಳ್ಳ ಕ್ಯೂಲೆಕ್ಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಬಹು ಮುಖ್ಯವಾಗಿ ನಾವು ವಾಸಿಸುವ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಹಿ ಬಿ ಡಿ ಮೇಲ್ವಿಚಾರಕ ಎಸ್ ಸಿ ರುದ್ರವಾಡಿ ಹೇಳಿದರು.
ತಾಲ್ಲೂಕಿನ ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ ರಾತ್ರಿ 120 ಜನರ ರಕ್ತ ಲೇಪನ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ,
ರೋಗದ ನಿಯಂತ್ರಣಕ್ಕಾಗಿ ಹಾಗೂ ರೋಗಿಗಳ ಪತ್ತೆ ಮಾಡುವುದು ಅತ್ಯಂತ ಕಷ್ಟಕರವಾಗಿದ್ದು, ಆನೆಕಾಲು ರೋಗದ ಪತ್ತೆಗಾಗಿ ರಾತ್ರಿ ವೇಳೆಯಲ್ಲಿಯೇ ರಕ್ತದ ಮಾದರಿ ಸಂಗ್ರಹಿಸಬೇಕಾಗುತ್ತದೆ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.
ತಡವಾಗಿ ಕಾಣಿಸಿಕೊಳ್ಳುವ ಸೋಂಕು:
ಆನೆಕಾಲು ರೋಗದವರಿಗೆ ಕಚ್ಚಿದ ಸೊಳ್ಳೆ, ಆರೋಗ್ಯವಂತರಿಗೆ ಕಚ್ಚಿದರೂ ರೋಗ ಹರಡುತ್ತದೆ. ಈ ರೋಗವು ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಸೊಳ್ಳೆ ಕಚ್ಚಿ 5 ರಿಂದ 7 ವರ್ಷಗಳವರೆಗೆ ಸೋಂಕಿರುವುದು ಕಾಣುವುದಿಲ್ಲ. ಮೊದಲ ಹಂತದಲ್ಲಿ ಆಗಾಗ್ಗೆ ಜ್ವರ ಕಾಣಿಸಿಕೊಳ್ಳುತ್ತದೆ. ಹಂತ ಹಂತವಾಗಿ, ಕಾಲು, ಕೈ, ವೃಷಣ, ಸ್ತನಗಳಲ್ಲಿ ಊತ ಕಂಡು ಬರುತ್ತಿರುತ್ತದೆ. ರಕ್ತ ಪರೀಕ್ಷೆಯಲ್ಲಿ ಆನೆಕಾಲು ರೋಗದ ರೋಗಾಣು ಪತ್ತೆಯಾದಲ್ಲಿ ಅದನ್ನು ಡಿಇಸಿ ಮಾತ್ರೆಗಳ ಮೂಲಕ ನಿಯಂತ್ರಿಸಬಹುದು ಇದಕ್ಕಾಗಿ ಶಿಬಿರಗಹಳನ್ನು ಆಯೋಜಿಸಿ, ರೋಗಿಗಳನ್ನು ಗುರುತಿಸುವ ಕಾರ‍್ಯ ಮಾಡಲಾಗುತ್ತಿದೆ ಎಂದರು.
ಈ ಕುರಿತು ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ ಅವರು ಮಾತನಾಡಿ,ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಈ ಕಾರ್ಯಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಸಿಬ್ಬಂದಿಗಳು ಆಲೂರ ಗ್ರಾಮದಲ್ಲಿ ರಾತ್ರಿ 10: ಘಂಟೆಯಿಂದ ಮಧ್ಯರಾತ್ರಿ ವರಗೆ ಪರೀಕ್ಷೆ ನಡೆಸಿದ್ದರು ಈ ಸಂದರ್ಭದಲ್ಲಿ ಸುಮಾರು 120 ಜನರ ರಕ್ತ ಲೇಪನಗಳನ್ನು ಸಂಗ್ರಹಿಸಿ ಅವುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತಲುಪಿಸಲಾಗುತ್ತದೆ.
ಈ ಸಮೀಕ್ಷಾ ಕಾರ್ಯದಲ್ಲಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಗ್ರಾಮ ಪಂಚಾಯತ ಸಿಬ್ಬಂದಿಗಳು ರಾತ್ರಿ ಆರೋಗ್ಯ ಸಿಬ್ಬಂದಿಗಳೊಂದಿಗೆ ಇದ್ದು ಸಹಕಾರ ನೀಡಿದರು ಸ್ಥಳೀಯ ಜನರಿಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಮನವೊಲಿಸಲಾಯಿತ್ತು ಎಂದರು.
ಈ ಸಂದರ್ಭದಲ್ಲಿಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ವ್ಹಿ ಬಿ ಡಿ ಮೇಲ್ವಿಚಾರಕ ಎಸ್ ಸಿ ರುದ್ರವಾಡಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಬಿ ಹೂಗಾರ ಸಮುದಾಯ ಆರೋಗ್ಯ ಅಧಿಕಾರಿ ಸರಸ್ವತಿ ಸೈದಣ್ಣವರ ಹಾಗೂ ವಾಹನ ಚಾಲಕ ಮುತ್ತು ಬಾಗೇವಾಡಿ ಆಶಾ ಕಾರ್ಯಕರ್ತೆಯರಾದ ರೇಣುಕಾ ಹಳೆಮ,ನಿ ನಿಂಗಮ್ಮ ಹಿರೇಗೌಡರ, ಸೇರಿದಂತೆ ಉಪಸ್ಥಿತರಿದ್ದರು.