ಗ್ರಾಮೀಣ ಪ್ರದೇಶಗಳಲ್ಲಿ ಸೌಹಾರ್ದ ಸಹಕಾರಿ ಉದಯಿಸಿಲಿ :ಸಂಸದ ರಮೇಶ ಜಿಗಜಿಣಗಿ
ಇಂಡಿ : ಸೌಹಾರ್ದ ಸಹಕಾರಿ ಕ್ಷೇತ್ರ ಪವಿತ್ರವಾದದ್ದು, ಅದು ಗ್ರಾಮೀಣ ಪ್ರದೇಶಗಳಲ್ಲಿ ಉದಯಿಸಿ ರೈತರಿಗೆ ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡಲಿ ಎಂದು ಸಂಸದ ರಮೇಶ್ ಜಿಗಜಿಣಿಗಿ ಹೇಳಿದರು.
ರವಿವಾರ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಅಥರ್ಗಾ ಗ್ರಾಮೀಣ ಸೌಹಾರ್ದ ಸಹಕಾರಿಯ 3 ನೇ ಶಾಖೆ ಉದ್ಘಾಟಿಸಿ ಮಾತನಾಡತ್ತಿದ್ದರು.ಇಂದು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯುವುದು ಸುಲಭದ ಮಾತಲ್ಲ. ರೈತರು,ಕೂಲಿ ಕಾರ್ಮಿಕರು, ಜನಸಾಮಾನ್ಯರು ಅಂತ್ಯತ ಕಷ್ಟ ಪಡುತ್ತಿದ್ದಾರೆ. ಆದರೆ ಇಂತಹ ಸೌಹಾರ್ದ ಸಹಕಾರ ಸಂಘಗಳಿಂದ ತ್ವರಿತವಾಗಿ ಹಣ ದೊರೆಯುತ್ತದೆ. ನಿಮ್ಮ ಇಚ್ಚಿತ ಕೆಲಸ ಕಾರ್ಯಗಳು ಅತ್ಯಂತ ಬೇಗ ಮಾಡಿಕೊಳ್ಳಬಹುದು ಎಂದು ಹೇಳಿದರು.ಇನ್ನೂ ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸಗಳಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಆಡಳಿತ ಮಂಡಳಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದೇ ಆದಲ್ಲಿ, ಸಹಕಾರಿ ಸಂಘಗಳು ಯಶಸ್ಸು ಹೊಂದಲು ಸಾಧ್ಯ ಎಂದು ಹೇಳಿದರು.
ನಾನು ಯಾವ ಜಾತಿ, ಮತ, ಪಂತ ಬೇದ ಮಾಡಿಲ್ಲ. ಸುಖಾ ಸುಮ್ನೆ ಸುಳ್ಳು ಹೇಳುವರ ಮಾತಿಗೆ ಕಿವಿಕೊಡಬೇಡಿ, ತಾಲ್ಲೂಕಿನ ಅಭಿವೃದ್ಧಿಗೆ ಎಂದು ಹಿಂದೇಟು ಹಾಕಿಲ್ಲ. ಆ ಪ್ರಮೇಯೂ ಬರುವುದಿಲ್ಲ. ರೂಗಿ, ಬೊಳೆಗಾಂವ, ತಡವಲಗಾ ಮಾರ್ಗದಲ್ಲಿ ಅತೀ ಹೆಚ್ಚು ತಿರುಗಾಟ ಮಾಡಿದ್ದೆನೆ. ಅದಲ್ಲದೆ ಶೋಷಿತ ದಲಿತ ಸಮುದಾಯದ ವ್ಯಕ್ತಿ ಸುಮಾರು 50 ವರ್ಷ ರಾಜಕಾರಣ ಮಾಡುವುದು ಸುಲಭದ ಮಾತಲ್ಲ. ಅದಕ್ಕೆ ನೀವು ಕಾರಣ ಎಂದು ಹೇಳಿದರು. ಈ ಭಾಗದಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಯೋಜನೆ ಜಾರಿಗೆಗೊಂಡಿದ್ದು, ಎರಡು ವಾರದಲ್ಲಿ ಇಂಡಿ ಪಟ್ಟಣದಲ್ಲಿ ಭೂಮಿ ಪೂಜೆ ನೆರೆವರಿಸಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಬಡವರ, ರೈತಾಪಿ ವರ್ಗದವರಿಗೆ ಬ್ಯಾಂಕಿನ ಸಕಲ ಸೌಲಭ್ಯಗಳು ‘ದಿನವಿಡೀ ಸೇವೆ ನೀಡುವ ಉದ್ದೇಶದಿಂದ ಇಲ್ಲಿ ಶಾಖೆ ತೆರೆದಿದ್ದೇವೆ’ ಎಂದು ಹೇಳಿದರು. ಪ್ರಾಸ್ಥಾವಿಕವಾಗಿ ಶಿಕ್ಷಕ ರವಿ ಗಿಣ್ಣಿ ಹಾಗೂ ಅಣ್ಣಪ್ಪ ಸಾಹುಕಾರ್ ಎಸ್ ಖೈನೂರು ಮಾತನಾಡಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಮುರಗೇಂದ್ರ ಸ್ವಾಮೀಜಿ, ಪಾವನ ಸಾನಿಧ್ಯ ಅಭಿನವ ಪುಂಡಲಿಂಗೇಶ್ವರ ಶಿವಯೋಗಿ, ಮಾತೋಶ್ರಿ ಸುಗಲಾದೇವಿ ಅಮ್ಮನವರು, ಮಲ್ಲಪ್ಪ ಪೂಜಾರಿ, ಗ್ರಾ.ಪಂ ಅಧ್ಯಕ್ಷೆ ಸೋಮವ್ವ ಹೊಸಮನಿ, ಉಪಾಧ್ಯಕ್ಷ ಅಂಬವ್ವ ಕೊಟಗೊಂಡ, ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಹತ್ತರಕಿ, ಜೆಟ್ಟಪ್ಪ ಪೂಜಾರಿ, ಆರ್ ಎಮ್ ಬಣಗಾರ, ಎಸ್ ಎಮ್ ಬುರಕಲೆ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಸ್ವಾಗತ ಸುನಿಲ್ ರಬಶೆಟ್ಟಿ, ನಿರೂಪಣೆ ಹಾಗೂ ವಂದನಾರ್ಪಣೆ ದ್ಯಾವಪ್ಪ ಹಿರೇಕುರಬರ ನೆರಿವೆರಿಸಿದರು.