ಸಿಂಧನೂರು: ಸಂವಿಧಾನ ಶಿಲ್ಪಿ, ಡಾ: ಬಿ.ಆರ್. ಅಂಬೇಡ್ಕರ್ ನಾಮ ಫಲಕಕ್ಕೆ ತಾಲೂಕಿನ ಬಂಗಾರಿ ಕ್ಯಾಂಪಿನಲ್ಲಿ ಕೋಮುವಾದಿಗಳಿಂದ ಮಸಿ ಬಳಿಯಲ್ಪಟ್ಟಿದ್ದು, ವಿಷಯ ತಿಳಿಯುತ್ತಿದ್ದಂತೆ ಬಂಗಾರಿ ಕ್ಯಾಂಪಿಗೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶಿಲಿಸಿ, ಭಾರತರತ್ನ, ವಿಶ್ವ ಮಾನವ, ಡಾ: ಬಿ.ಆರ್. ಅಂಬೇಡ್ಕರ್ ನಾಮಫಲಕಕ್ಕೆ ಕೋಮುವಾದಿಗಳು, ಮನುವಾದಿಗಳ ವಿಕೃತ ಮನಸ್ಸುಗಳು ಮಸಿ ಬಳಿದಿರುವುದು ಅತ್ಯಂತ ಖಂಡನೀಯ.
ಈ ಕೃತ್ಯವನ್ನು ಖಂಡಿಸಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಮತ್ತು ಪ್ರಗತಿಪರ ಒಕ್ಕೂಟ ಹಾಗೂ ಡಾ: ಬಿ.ಆರ್. ಅಂಬೇಡ್ಕರ್ ಯುವಕ ಮಂಡಳಿ ಬಂಗಾರಿ ಕ್ಯಾಂಪ್ ವತಿಯಿಂದ ಅಲ್ಲದೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ತಹಶೀಲ್ದಾರರಿಗೆ ಮನವಿ ನೀಡಿ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರಾದ ಎಂ.ಗಂಗಾಧರ, ಹಸೇನಪ್ಪ ಸೂಲಂಗಿ, ಮಾಬುಸಾಬ ಬೆಳ್ಳಟ್ಟಿ, ಪಂಪಾಪತಿ ತಿಡಿಗೋಳ, ಮೌನೇಶ ದೊರೆ, ಸೈಯ್ಯದ್ ರಬ್ಬಾನಿ ಜಾಗೀರದಾರ ವಕೀಲರು, ಸುರೇಶ ಕಟ್ಟಿಮನಿ, ಲಕ್ಷ್ಮೀ ಪತ್ತಾರ, ನೀರುಪಾದಿ ಗೋಮರ್ಸಿ, ಬಂಗಾರಿ ಕ್ಯಾಂಪಿನ, ಅಮರೇಶ, ಸಾಬಣ್ಣ, ಭೀಮೇಶ, ಲಾಲಪ್ಪ, ಬಾಲಪ್ಪ, ಯಮನೂರ, ರಘು, ಪ್ರಭು ಸೇರಿದಂತೆ ಅನೇಕರು ಇದ್ದರು.