ಇಂಡಿಯಲ್ಲಿ ಅಂಬಾಭವಾನಿ 31 ನೇ ವಾರ್ಷಿಕೋತ್ಸವದ ಸಂಭ್ರಮ
ಇಂಡಿ : ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ 31 ನೇ ವರ್ಷದ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಜಣೆಯಿಂದ ಜರುಗಿತು. ಬೆಳಗ್ಗೆ ದೇವಿಗೆ ಆರತಿ, ಅಲಂಕಾರ, ಪೂಜೆ,ಅಭಿಷೇಕ ನಡೆಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಭವ್ಯ
ಮೆರವಣೆಗೆ ನಡೆಯಿತು. ಡೊಳ್ಳು,ಬಾಜಾ,ಭಜಂತ್ರಿ, ಚಿಟ್ಟಲಗಿ, ಸಂಬಳ ಸಮೇತ ಆಕರ್ಷಕ ಮೆರವಣೆಗೆ ಅಲಂಕೃತ ವಾಹನದಲ್ಲಿ ದೇವಿಯ ಮೂರ್ತಿ ಮತ್ತು ಪಾಲಕಿ ಮೆರವಣೆಗೆ ನಡೆಯಿತು.
ಮೆರವಣೆಗೆಯಲ್ಲಿ ಆಯಿ ರಾಧೇ ಉದೋ ಉದೋ,
ಅಂಬಾಭವಾನಿ ಉಧೋ ಉಧೋ ಘೋಷಣೆ
ಮೊಳಗಿದವು. ನಂತರ ನಡೆದ ಸಮಾರಂಭದಲ್ಲಿ ದಾನಿಗಳಾದ ಬಾಲಾಜಿ ಇಫ್ ಕ್ವಾಯಿಲ್ ಮತ್ತಿತರನ್ನು
ಸನ್ಮಾನಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಅರುಣ ಕೋಳೆಕರ, ಗಣೇಶ ಮಹೀಂದ್ರಕರ,ಬಾಪು ಮಹೀಂದ್ರಕರ, ವಿಜಯ ಪತಂಗೆ,ಸುಭಾಸ ಬಳಮಕರ, ನಾಗನಾಥ ಹಂಚಾಟೆ, ರಮಾಕಾಂತ ಕೋಳೆಕರ, ಮನೋಜ ಕೋಳೆಕರ, ಬಾಬುರಾವ ಸುಲಾಖೆ, ರಮೇಶ ಸುಲಾಖೆ, ನಂದು ಸುಲಾಖೆ, ಡಾ|| ರಾಜೇಶ ಕೋಳೆಕರ, ಕಿರಣ ಬಳಮಕರ, ಶಿವಾಜಿ ಕೋಳೆಕರ, ರಮೇಶ ಹಂಚಾಟೆ, ಶಶಿಕಾಂತ ಮಹಿಂದ್ರಕರ, ಅಂಬಾದಾಸ ಮಿರಜಕರ, ಇಂಜಿಯರಿಂಗ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಧರ ಕೋಳೆಕರ ಮತ್ತಿತರಿದ್ದರು.