ಭಾರತ ವಿಶ್ವದೆದುರು ಸಾಂಸ್ಕೃತಿಕ ದೇಶವೆಂದು ಗುರುತಿಸಿಕೊಳ್ಳಲು, ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ : AC ಅಬೀದ್ ಗದ್ಯಾಳ
ಇಂಡಿ : ಭಾರತ ವಿಶ್ವದೆದುರು ಸಾಂಸ್ಕೃತಿಕ ದೇಶವೆಂದು ಗುರುತಿಸಿಕೊಂಡಿದ್ದು, ಅದಕ್ಕೆ ಅಮರಶಿಲ್ಪಿ ಜಕಣಾಚಾರಿ ಅವರು ನೀಡಿದ ಕೊಡುಗೆಯೇ ಕಾರಣ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅಭಿಪ್ರಾಯಪಟ್ಟರು.
ಇಂಡಿ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆಬೀಡು, ಪಟ್ಟದಕಲ್ಲು, ಐಹೊಳೆ ಸೇರಿ ಹಲವು ಪ್ರದೇಶಗಳಲ್ಲಿ ಜಕಣಾಚಾರಿ ಅವರು ಮೂಡಿಸಿದ ಶಿಲ್ಪಕಲೆಯು ಜಗತ್ತನ್ನು ಸೆಳೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ ಎಸ್ ಕಡಕಬಾವಿ, ಶಿರಸ್ತೆದಾರರು ಕಂದಾಯ ನಿರೀಕ್ಷಿಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.