ಮುದ್ದೇಬಿಹಾಳ:೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಗಳಾಗಿದ್ದ ಶರಣರು (ಅಮರಗಣಂಗಳು) ಐಕ್ಯರಾಗಿರುವ ಕೃಷ್ಣಾ ನದಿ ತೀರದ ಅಮರಗೋಳ ಗ್ರಾಮವನ್ನು ಪುಣ್ಯಕ್ಷೇತ್ರ ಮಾಡುವಂತೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಒತ್ತಾಯಿಸಲಾಗಿದೆ. ಈ ಭಾಗದವರೆಲ್ಲರೂ ಈ ಬಗ್ಗೆ ಹಕ್ಕೊತ್ತಾಯ ಮಾಡಲು ಅಣಿಯಾಗಬೇಕು ಎಂದು ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನದ ಪೀಠಾಧಿಪತಿ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಕರೆ ನೀಡಿದರು.
ಮುದ್ದೇಬಿಹಾಳ ತಾಲೂಕು ಅಮರಗೋಳದ ಶ್ರೀ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಭಾಮಿನಿ ಷಟ್ಪದಿ ಕವಿ ಮಲಕಣ್ಣ ಮಾಸ್ತರ ಅಮರಗೋಳ (ಮಲಿಕಸಾಬ ನದಾಫ) ಅವರ ೮ನೇ ಸ್ಮರಣೋತ್ಸವ, ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ, ನಿವೃತ್ತರಿಗೆ, ಸಾಧಕರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು.
ಅಮರಗೋಳ ಗ್ರಾಮವು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮ, ಬಸವಣ್ಣನವರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ ಮತ್ತು ಬಸವಣ್ಣನ ಧರ್ಮಪತ್ನಿ ನೀಲಾಂಬಿಕೆಯ ಐಕ್ಯಸ್ಥಳ ತಂಗಡಗಿಯಿAದ ಕೂಗಳತೆ ದೂರದಲ್ಲಿದೆ. ಎಲ್ಲರೂ ಹಕ್ಕೊತ್ತಾಯಕ್ಕೆ ಅಣಿಯಾದಲ್ಲಿ ನಾನೂ ಸೇರಿ ಈ ಭಾಗದ ಸ್ವಾಮೀಜಿಗಳು ನಿಮ್ಮ ಜೊತೆಗಿರುತ್ತೇವೆ. ಮಲಕಣ್ಣನವರ ಕುರಿತು ಹೊರಬರಲಿರುವ ಸಾಹಿತ್ಯ ಅರ್ಥಪೂರ್ಣವಾಗಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಅಶೋಕ ಮಣಿ ಅವರು ಮಾತನಾಡಿ ಮಲಕಣ್ಣನವರ ಜೀವನ ಚರಿತ್ರೆ ಕುರಿತಾದ ಪುಸ್ತಕ ಬರೆಯುವ ಅಪೇಕ್ಷೆ ಮಾಡಿದ್ದು ಮುಂದಿನ ವರ್ಷ ಇದೇ ವೇದಿಕೆಯ ೯ನೇ ಸ್ಮರಣೋತ್ಸವದಲ್ಲಿ ಅದನ್ನು ಬಿಡುಗಡೆಗೊಳಿಸುವೆ. ಸೌಹಾರ್ದತೆಯ ಪ್ರತೀಕವಾಗಿರುವ ಮಲಕಣ್ಣ ಮಾಸ್ತರ ಅವರು ಪೂಜನೀಯರು ಎಂದರು.
ಸಮಾರAಭ ಉದ್ಘಾಟಿಸಿದ ತಂಗಡಗಿ ಸಿದ್ದಾರೂಢ ಮಠದ ಮಾಧವಾನಂದಭಾರತಿ ಸ್ವಾಮೀಜಿ, ವಿಬಿಸಿ ಪ್ರೌಢಶಾಲೆಯ ಶಿಕ್ಷಕ ಎಚ್.ಆರ್.ಬಾಗವಾನ ಅವರು ರಚಿಸಿದ ತತ್ವಪದಕಾರ ಶ್ರೀ ಬಸಪ್ಪ ಶರಣರ ಜೀವನಗಾಥೆ ಕೃತಿ ಬಿಡುಗಡೆಗೊಳಿಸಿದ ಇಳಕಲ್ನ ಸಾಹಿತಿ ಮುರ್ತುಜಾಬೇಗಂ ಕೊಡಗಲಿ, ಮುಖ್ಯ ಅತಿಥಿಗಳಾಗಿದ್ದ ಮುದ್ದೇಬಿಹಾಳ ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವಾಗ್ಮಿ ಪರಶುರಾಮ ಚೌಡಕೇರ, ವಚನ ಮತ್ತು ಸಾಂಸ್ಕೃತಿಕ ಪರಿಷತ್ನ ಜಿಲ್ಲಾಧ್ಯಕ್ಷ ಅಬ್ದುಲ್ರಹೆಮಾನ ಬಿದರಕುಂದಿ, ಕಾರ್ಯಕ್ರಮ ಆಯೋಜಕ ಶೇಖಸಾಬ ನದಾಫ, ಎಚ್.ಆರ್.ಬಾಗವಾನ ಇನ್ನಿತರರು ಮಾತನಾಡಿದರು.
ಕಾಶಿಂಬಿ ಮಲಿಕಸಾಬ ನದಾಫ ಉಪಸ್ಥಿತಿಯಲ್ಲಿ, ಮಲಕಣ್ಣ ಮಾಸ್ತರ ಅಮರಗೋಳ ಭಾವೈಕ್ಯ ಸಾಹಿತ್ಯ ವೇದಿಕೆ, ಡಾ.ಸಿಂಪಿ ಲಿಂಗಣ್ಣ ಸಾಹಿತ್ಯ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಹಾಗೂ ಸಾಂಸ್ಕöÈತಿಕ ಪರಿಷತ್ತು, ಕನ್ನಡ ಜಾನಪದ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಬಿಸಿ ಪ್ರೌಢಶಾಲೆಯ ಶಿಕ್ಷಕ ಎಚ್.ಆರ್.ಬಾಗವಾನ ಅವರಿಗೆ ಸಾಹಿತ್ಯ ರತ್ನ, ಎಂ.ಡಿ.ಅತ್ತಾರ, ಎನ್.ಎಚ್.ನಾಯ್ಕೋಡಿ, ಶೇಖವ್ವ ಪುಡಜಾಲಿ, ಎಚ್.ಸಿ.ಗುಡದಿನ್ನಿ, ಎಂ.ಕೆ.ಬಾಗವಾನ, ದಾನಮ್ಮ ಸುಕಾಲಿ, ಎಸ್.ಎಸ್.ಸಜ್ಜನ, ಎಂ.ಬಿ.ಗಣಾಚಾರಿ, ಆರ್.ಎ.ಲೋಣಿ, ಎಂ.ಜಿ.ಕುನ್ನೂರ ಶಿಕ್ಷಕರಿಗೆ ಉತ್ತಮ ಶಿಕ್ಷಕ, ಶಿಕ್ಷಕಿ ಪ್ರಶಸ್ತಿ ಪ್ರದಾನಿಸಿ ಸತ್ಕರಿಸಲಾಯಿತು. ಸಾಧಕರಾದ ಬಿ.ಬಿ.ಪಿಂಜಾರ, ಎಂ.ಡಿ.ನದಾಫ, ಎಸ್.ಪಿ.ಲಮಾಣಿ, ವಿ.ಎಚ್.ಕುಲಕರ್ಣಿ, ರವಿಗೌಡ ಪಾಟೀಲ, ನಿವೃತ್ತರಾದ ಎಚ್.ಡಿ.ಆಲೂರ, ಝಡ್.ಎಂ.ಬೀಳಗಿ ಸೇರಿ ಹಲವರನ್ನು ಸನ್ಮಾನಿಸಲಾಯಿತು.
ಸಿಆರ್ಪಿ ಬಿ.ಜಿ.ಬಶೆಟ್ಟಿ, ದೊಡ್ಡಯ್ಯ ಹಿರೇಮಠ, ವಿನೋದ ಹಿರೇಮಠ, ಬಿ.ಪಿ.ಪಾಟೀಲ, ಗ್ರಾಪಂ ಸದಸ್ಯರಾದ ಬಸವರಾಜ ಗೋಡಿ, ನೀಲಮ್ಮ ಹಡಲಗೇರಿ, ಮಂಜುಳಾ ವಡ್ಡರ, ಗದ್ದೆಮ್ಮ ವಾಲಿಕಾರ, ಎಸ್.ಬಿ.ಕವಡಿಮಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.
ಮೌಲಾನಾ ಮಹ್ಮದರಫೀಕ ಕಮಲದಿನ್ನಿ ಕುರಾನ್ ಪಠಿಸಿದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ಕೆ.ಹಡಲಗೇರಿ ಸ್ವಾಗತಿಸಿದರು. ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಉಪಾಧ್ಯಕ್ಷೆ ಬಿ.ಎಂ.ಗದ್ದಿ ನಿರೂಪಿಸಿದರು. ಎ.ಎಂ.ನದಾಫ ವಂದಿಸಿದರು.