ಇಂಡಿ : ಪಟ್ಟಣದ ಬಿ.ಎಸ್.ಎನ್.ಎಲ್ ಕಾಂಪೌಂಡಿಗೆ ಹತ್ತಿ ನೂರಾರು ಜನ ಬೀದಿ ಬದಿಯಲ್ಲಿ ಸುಮಾರು 20 ವರ್ಷಗಳಿಂದ ವ್ಯಾಪಾರ ನಂಬಿ ಜೀವನ ಸಾಗಿಸುತ್ತಿದ್ದಾರೆ. ಏಕಾಏಕಿ ವ್ಯಾಪಾರ ಸ್ಥಗಿತದಿಂದ ಜೀವನ ದುಸ್ತರವಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.
ಪೋಲೀಸ್ ಇಲಾಖೆಯಿಂದ ತೊಂದರೆ ಆಗುತ್ತಿದ್ದು, ಎರಡು ವರ್ಷಗಳ ಹಿಂದೆ ಮಾಡಿದ ಸಾಲವನ್ನು ಇನ್ನು ತೀರಿಸಿಲ್ಲ. ಕರೋನಾದಿಂದಾಗಿ ನಮ್ಮ ಬದುಕು ಬೀದಿಗೆ ಬಿದ್ದಿದೆ. ದೇವರ ದಯದಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ನಮಗೆ ವ್ಯಾಪಾರ ಮಾಡಲು ಕಷ್ಟವಾಗುತ್ತಿದೆ. ನಮಗೆ ನ್ಯಾಯ ಒದಗಿಸಬೇಕು ಎಂದು ಇಂಡಿ ಉಪ ವಿಭಾಗಾಧಿಕಾರಿಯಾದ ರಾಮಚಂದ್ರ ಗಡಾದೆ ರವರಿಗೆ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಿ ಡಿ ಪಾಟೀಲ ಮಾತನಾಡಿದ ಅವರು, ದಿನದ ಊಟಕ್ಕೆ ರಣ ಬಿಸಿಲಿನಲ್ಲಿ ಬೀದಿಯಲ್ಲಿ ವ್ಯಾಪಾರ ಮಾಡುವ ಬಡ ವ್ಯಾಪಾರಿಗಳಿಗೆ ಕಿರುಕುಳ ಕೊಡುವುದರಿಂದ ಅವರ ಸಂಸಾರ ಬೀದಿಯಲ್ಲಿ ಬೀಳುವುದು. ಮಾನ್ಯ ಉಪ ವಿಭಾಗಾಧಿಕಾರಗಳು ಅತಂತ್ರ ಸ್ಥಿತಿಯಲ್ಲಿ ಇರುವ ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಈ ವೇಳೆ ಹಾಜಿ ಮಲಂಗ್ ಮುಲ್ಲಾ, ಸುಲ್ತಾನ್ ಮಕಾಂದರ, ಅಲಿಸಾಬ ಬಾಗವಾನ, ರಿಯಾನ್ ಶೇಖ್, ಆರೀಫ್ ಮುಲ್ಲಾ,ಕಿರಣ ಸಾಳೋಂಕೆ, ರಜಾಕ್ ಬಾಗವಾನ, ಸದ್ದಾಂ ವಾಲಿಕಾರ, ಭೀಮ ಪೂಜಾರಿ, ಮೌಲಾ ಬಾಗವಾನ, ಮುಖಂಡರಾದ ಮರೆಪ್ಪ ಗಿರಣಿ ವಡ್ಡರ, ಅಯೋಬ ನಾಟೀಕರ, ಶ್ರೀಶೈಲ ಗೌಡ ಪಾಟೀಲ್, ಸಿದ್ದು ಡಂಗಾ, ಮಹಿಬೂಬ ಬೇವನೂರ, ನಿಯಾಝ್ ಅಗರಖೇಡ, ಇರ್ಫಾನ್ ಪಠಾಣ್, ಸಂಜು ಪಾಯಕರ, ರಾಜು ಮುಲ್ಲಾ, ಇಸಾಕ ಸೌದಾಗರ, ಮನೋಹರ ನಾವಿ, ದುಂಡು ಬಿರಾದಾರ, ರವಿ ಶಿಂದೆ, ಮಲ್ಲು ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.