ಮುದ್ದೇಬಿಹಾಳ: ಇಲ್ಲಿನ ಜ್ಞಾನಭಾರತಿ ವಿದ್ಯಾ ಮಂದಿರದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತ್ ವಿಜಯಪುರ ಹಾಗೂ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಸ್ಪರ್ಶ ಕುಷ್ಟರೋಗ ಅರಿವು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ ಮಾತನಾಡಿ, ಜಿಲ್ಲೆಯಲ್ಲಿ ಕುಷ್ಠರೋಗವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕುಷ್ಠರೋಗವು ಮೈಕ್ರೋ ಬ್ಯಾಕ್ಟೋರಿಯಾಮ್ ಲೇಫ್ರಿ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಇದು ನರಗಳ ಹಾಗೂ ಚರ್ಮದ ಮೇಲೆ ಪರಿಣಾಮ ಬೀಳುತ್ತದೆ. ದೇಹದ ಯಾವುದೇ ಭಾಗದಲ್ಲಿ ತಿಳಿ-ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳ ಮೇಲೆ ಸ್ಪರ್ಶಜ್ಞಾನ ಇರುವುದಿಲ್ಲ. ಇಂಥ ಮಚ್ಚೆಗಳು ಕಂಡುಬಂದಲ್ಲಿ ತಾಲೂಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು. ಈ ರೋಗದಿಂದ ಭಯಪಡುವ ಅವಶ್ಯವಿಲ್ಲ ಎಂದರು.
ನಂತರ ಕುಷ್ಠರೋಗದ ನಿರ್ಮೂಲನೆಗೆ ಬಗ್ಗೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಸರಸ್ವತಿ ಮಡಿವಾಳರ, ಶಾಲಾ ಆಡಳಿತ ಅಧಿಕಾರಿ ಜಿ ಜೆ ಪಾದಗಟ್ಟಿ, ಶಿಕ್ಷಕರಾದ ಎಸ್ಎಸ್ ಹರಿಜನ, ಆರ್ ಜೆ ಸಾಗರ, ಎಂ ಪಿ ಪಡದಾಳಿ,ಕಿರಣ್ ಕಡಿ, ಬಿ ಆರ್ ಬೆಳ್ಳಿಕಟ್ಟಿ, ಗುರುವಾಯಿ ತಂಗಡಗಿ, ಶಾಹಿನ್ ನಾಲತವಾಡ, ಭಾಗ್ಯಶ್ರೀ ಶಿವಶಿಂಪಿ, ರಾಧಾ ಕೊಲಕಾರ, ರಂಜಿತಾ ಹೆಗಡೆ, ಮೀನಾಕ್ಷಿ ಗಣಾಚಾರಿ, ಇಂದು ನಾಯಕ, ರೂಪಾ ನಾಟಿಕರ, ಶಿವಶಂಕರ್ ಹಿರೇಮಠ, ಆಶಾ ಕಾರ್ಯಕರ್ತೆ ಕವಿತಾ ಅರಳದಿನ್ನಿ,ಸೇರಿದಂತೆ ಭಾಗವಹಿಸಿದ್ದರು.