ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ : ರಾಜಶೇಖರ ದೈವಾಡಗಿ
ವಿಜಯಪುರ : ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದೈವಾಡಗಿ ಹೇಳಿದರು.
ನಗರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲಯನ್ಸ್ ಪುಟ್ಬಾಲ್ ಕ್ಲಬ್ ವತಿಯಿಂದ ಹಮ್ಮಿಕೊಂಡ 21 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಪಂದ್ಯಾವಳಿ ಡಾ.ಬಿ.ಆರ್. ಅಂಬೇಡ್ಕರ್ ಪುಟ್ಬಾಲ್ ಪಂದ್ಯಾಳಿ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದಿನ ನಿತ್ಯದ ಜಂಜಾಟದಲ್ಲಿ ನಾವು ಮಾನಸಿಕ ದೈಹಿಕವಾಗಿ ಕುಗ್ಗುತ್ತಿದ್ದೇವೆ. ಅವುಗಳನ್ನು ನಿವಾಸಿಕೊಳ್ಳಲು ನಾವು ಪ್ರತಿಯೊಬ್ಬರು ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗಿಕೊಂಡರೆ ಮಾನಸಿಕ, ದೈಹಿಕವಾಗಿ ನಿರಾಳರಾಗುತ್ತೇವೆ. ಅದರಂತೆ ಸದೃಢವಾದ ಆರೋಗ್ಯ ಹೊಂದಲು ಕ್ರೀಡೆಗಳು ಬಹಳಷ್ಟು ಉಪಕಾರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಫಯಾಜ ಕಲಾದಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುಕವರು ಮೊಬೈಲ್, ಗೆಜೆಟ್, ಕಂಪ್ಯೂಟರ್, ಲ್ಯಾಪಟಾಪ್‌ಗಳಿಗೆ ಅಂಟುಕೊAಡಿದ್ದಾರೆ. ಅವುಗಳಿಂದ ಹೊರ ಬರಬೇಕು. ಮೊಬೈಲ್ ನಲ್ಲಿರುವ ಆ್ಯಪ್‌ಗಳ ಜಾಲಕ್ಕೆ ಸಿಲುಕಿಕೊಂಡು ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹೊರಬಂದು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಿ.ಬಿ. ಪಾಟೀಲ, ಮಧು ಕಲಾದಗಿ, ಮಾನಿಕ ಗೋಳಸಕರ, ಡಾ. ಸಾವಿತ್ರಿ ಮಾಲಿಪಾಟೀಲ, ಸಂತೋಷ ರಾಠೋಡ, ವಿಠ್ಠಲ ಮಳಗಿ, ರಮೇಶ ಮಳಗಿ, ಶಾಂತು ಮೇಲಿನಮನೆ, ಸೋಮಶೇಖರ ಶಿಂಗೆ, ಕಿಟ್ಟು ಗಾಡಿವಡ್ಡರ, ದಾದಾಸಿಂಗ ಪವಾರ, ಇದ್ದರು.
ಈ ಸಂರ್ದಭದಲ್ಲಿ ಮೊಮ್ಮದ ಶೇಖ, ಕಿರಣ ರಾಠೋಡ, ವಿನಾಯಕ ಸಿಂಗೆ, ಆಕಾಶ ಅಳಗುಂಡಗಿ, ಬಸವರಾಜ ಬಾಂಡೆಕಾರ, ಸಂತೋಷ ಕಬಾಡೆ, ತಬರೇಜ್, ಗಣೇಶ ಬಾಂಡಕಾರ, ಆಕಾಶ ಕವಟಗಿ, ಈಶ್ವರ ಪಾಟೀಲ, ಮನೋಜ ದೊಡ್ಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಲ್ಲಪ್ಪ ಜಂಪ್ಲೆ ಸ್ವಾಗತಿಸಿದರು. ಶ್ರೀಧರ ಜೋಶಿ ನಿರೂಪಿಸಿದರು. ಹಿರಿಯ ಕ್ರೀಡಾ ಶಿಕ್ಷಕರಾದ ಗಣೇಶ ಭೋಸಲೆ ವಂದಿಸಿದರು.