ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಆಕ್ರೋಶ..! ಅಧಿಕಾರಿಗಳ ನಿರ್ಲಕ್ಷ್ಯ, ಸಾರ್ವಜನಿಕರ ಹಿಡಿಶಾಪ..!
ಅಮೆ ಗತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ..!
ಅಯ್ಯೋ ಅಯ್ಯಯ್ಯೋ.. ಏನು ಧೂಳು, ಏನು ಗೋಳು..! ಭೀಮೆಯ ಗಡಿಭಾಗದಲ್ಲಿ ಕೇಳವರಾರು..?
ಇಂಡಿ : ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯ ಗಡಿಯನ್ನು ಸೇರಿಸುವ 548 (ಬಿ) ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಚ್ಚುಕಟ್ಟಾಗಿ ನಡೆಯದಕ್ಕೆ ಸ್ಥಳೀಯರು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆ ಗಡಿಭಾಗದಲ್ಲಿ ನಡೆಯುತ್ತಿದೆ.
ಹೌದು ಭವಿಷ್ಯದ ಜಿಲ್ಲಾ ಕೇಂದ್ರದ ಕನಸ್ಸು ಕಾಣುತ್ತೀರುವ ಇಂಡಿ ತಾಲ್ಲೂಕಿನ ಜನರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಅತ್ಯಂತ ಕೆಟ್ಟ ಅನುಭವವನ್ನು ಅನುಭವಿಸುತ್ತಿದ್ದಾರೆ. ಕಾರಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲವು ಕಡೆ ನಿಧಾನಗತಿಯಲ್ಲಿ ಸಾಗಿದರೆ, ಕೆಲವು ಕಡೆ ಚುರಕಾಗಿ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಯೋಜಿತ ರೂಪದಲ್ಲಿ ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಿಂದ ಪ್ರಾರಂಭಗೊಂಡ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಇಂಡಿ ತಾಲೂಕಿನ ಅಗರಖೇಡ ಕ್ರಾಸವರೆಗೆ ನಡೆಯುತ್ತಿದ್ದು, ರೂಗಿ ಗ್ರಾಮದಿಂದ ಮತ್ತು ಇಂಡಿ ಪಟ್ಟಣಕ್ಕೆ ಸೇರುವ ರಸ್ತೆಯ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಕುಂಟತ್ತಾ ತೆವುಳತ್ತಾ ಸಾಗುತ್ತಿದೆ. ಇನ್ನೂ ಎಲ್ಲಿ ಬೇಕೋ..! ಅಲ್ಲಿ ಮನಸ್ಸೊ ಇಚ್ಚೆಯಂತೆ ರಸ್ತೆಯ ಅಗೆದಿದ್ದು, ಪ್ರಯಾಣಿಕರಿಗೆ ಸೂಕ್ತವಾದ ವ್ಯವಸ್ಥಿತ ಮಾರ್ಗ ಕಲ್ಪಿಸಿಲ್ಲ. ಅದಲ್ಲದೇ ಇಕ್ಕಾಟಾದ ರಸ್ತೆ ನಿರ್ಮಿಸಿದ್ದು, ರಸ್ತೆಯ ಮೇಲಲ್ಲಾ ಚಿಕ್ಕ ಪುಟ್ಟ ಕಲ್ಲುಗಳು ಬಿದ್ದಿವೆ. ಆ ಚಿಕ್ಕ ಪುಟ್ಟ ಕಲ್ಲುಗಳು ಪುಟಿದ್ದು ದ್ವಿಚಕ್ರ ವಾಹನ ಸವಾರರ ಮುಖ ಬಡಿದು ಹಾನಿ ಮಾಡುತ್ತಿವೆ. ರಸ್ತೆಯಲ್ಲಿ ಪದೆ ಪದೆ ನೀರು ಸಿಂಪಡಿಸಿ ಧೂಳು ಬಾರದಂತೆ ನೋಡಿಕೊಳ್ಳಬೇಕು. ಆದರೆ ನಿರ್ಲಕ್ಷ್ಯತನದಿಂದ ಯಾವೊಗ ಒಮ್ಮೆ ನೀರು ಸಿಂಪಡಿಸಿ ನೆಪಕ್ಕೆ ಮಾತ್ರ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಬಿಂಬಿಸುತ್ತಿದ್ದಾರೆ.
ಗ್ರಾಮಸ್ಥರು ಹಾಗೂ ರೈತರು ಬೆಸತ್ತು ಅಧಿಕಾರಿಗಳ ವಿರುದ್ಧ ಹಿಡಿಶಾಪ..!
ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ನಡೆದಿದ್ದರಿಂದ ರಸ್ತೆಯ ಪಕ್ಕದಲ್ಲಿರುವ ರೈತ ಕುಟುಂಬಗಳು ಹಾಗೂ ಪ್ರಯಾಣಿಕರು ಅಕ್ರೋಶಕ್ಕೆ ಕಾರಣ ಕಾಮಗಾರಿ ಹಿನ್ನೆಲೆಯಲ್ಲಿ ಅಲ್ಲಿಲ್ಲಿ ರಸ್ತೆ ಅಗದಿದ್ದು, ಚಿಕ್ಕಪುಟ್ಟ ಕಲ್ಲಗಳು ಪ್ರಯಾಣಿಕರಿಗೆ ಬಡಿದು ಹಾನಿ ಮಾಡುತ್ತಿವೆ. ಒಂದು ವೇಳೆ ಬೃಹತ್ ಗಾತ್ರದ ಬಸ್ ಹಾಗೂ ಹೈವಾ ದಂತಹ ವಾಹನಗಳು ಚಲಿಸಿದರೆ ರಸ್ತೆ ಧೂಳಿನಿಂದ ಸಂಪೂರ್ಣ ಕತ್ತಲುಮಯವಾಗುತ್ತದೆ. ಆದ್ದರಿಂದ ಮುಂದೆ, ಹಿಂದೆ ಬರುವ ಯಾವುದೇ ವಾಹನಗಳಿಗೆ ಸ್ವಲ್ಪವೂ ರಸ್ತೆ ಕಾಣುವುದಿಲ್ಲ. ಆ ಕಾರಣದಿಂದ ಅಪಘಾತ ಸಂಭವಿಸುವ ಲಕ್ಷಣಗಳು ದಟ್ಟವಾಗಿ ಕಾಣುತ್ತೇವೆ. ಅದಲ್ಲದೇ ರಸ್ತೆಯ ಪಕ್ಕದಲ್ಲಿರುವ ಲಿಂಬೆ, ದಾಳಿಂಬೆ ತೋಟಗಾರಿಕೆ ಬೆಳೆಗಳು ಸೇರಿದಂತೆ ಇನ್ನೂ ಅನೇಕ ಬೆಳಗಳ ಫಸಲು ಬರುವ ಮುನ್ನವೇ ಧೂಳು ಮಣ್ಣಿಗೆ ಆಹುತಿಯಾಗುತ್ತಿದೆ. ಪ್ರತಿನಿತ್ಯ ಧೂಳು ಸೇವಿಸಿ ಗ್ರಾಮಸ್ಥರು ಬೆಸತ್ತು ಹೋಗಿದ್ದಾರೆ. ಇನ್ನೂ ಕೆಲವು ಕಡೆ ರೋಗದಿಂದ ಬಳಲುವ ಕೆಟ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.
ಎಲ್ಲಿಂದ ಎಲ್ಲಿಯವರೆಗೆ ರಾಷ್ಟ್ರೀಯ ಹೆದ್ದಾರಿ
ಒಟ್ಟು 957 ಕೋಟಿ ರೂಪಾಯಿ ವೆಚ್ಚದಲ್ಲಿ 102 ಕಿ ಮೀ ರಾಷ್ಟ್ರೀಯ ಹೆದ್ದಾರಿ ವಿಜಯಪುರ ನಗರದಿಂದ ಮಹಾರಾಷ್ಟ್ರದ ಅಕ್ಕಲಕೋಟೆಯ ಮುರಮ ವರೆಗೆ ಕಾಮಗಾರಿ ನಡೆಯಬೇಕಾಗಿದೆ.
ಭೂ ಮಾಲೀಕರಿಗೆ ಭೂ ಪರಿಹಾರ ನೀಡಿದ ಬಳಿಕವಷ್ಟೇ ಕಾಮಗಾರಿ ಪ್ರಾರಂಭಿಸಬೇಕು, ಆದರೆ ಇನ್ನೂ ರೈತರು ತಹಶಿಲ್ದಾರ ಕಛೇರಿಗೆ ಅಲೆದಾಡುವ ಪರಿಸ್ಥಿತಿ ಇದೆ.ಇನ್ನೂ ರೈತರ ಬೆಳೆಗಳು ಸಂಪೂರ್ಣ ಧೂಳಿನಿಂದ ಹಾನಿಯಾಗಿವೆ. ರೈತರ ಪರಿಸ್ಥಿತಿ ಗಂಭೀರವಾಗಿದೆ. ಈ ಕೂಡಲೇ
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪ್ರತಿ ದಿನ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು. ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದರೆ ಒಳ್ಳೆಯ ರಸ್ತೆ ನಿರ್ಮಾಣ ಮಾಡುವಂತೆ ಸೂಚಿಸಬೇಕು.
ಮಲ್ಲಿಕಾರ್ಜುನ ಗುಡ್ಲ ಪ್ರಗತಿಪರ ರೈತ ಮುಖಂಡರು ಇಂಡಿ
ಮಗುವಿನಂತೆ ಬೆಳೆಸಿದ ತೋಟಗಾರಿಕೆ ಬೆಳೆಗಳು ಫಲ ನೀಡುವ ಸಂದರ್ಭದಲ್ಲಿ ಧೂಳಿಗೆ ಆಹುತಿಯಾಗುತ್ತಿದೆ. ಅದಲ್ಲದೇ ಪ್ರತಿ ಕ್ಷಣವೂ ರೈತರು ಧೂಳು ಸೇವಿಸಿ ಕೆಟ್ಟ ಪರಿಣಾಮಗಳು ಅನುಭವಿಸುತ್ತಿದ್ದಾರೆ. ಈ ಕೂಡಲೇ
ರೈತರ ಬೆಳೆಗಳಿಗೆ ಹಾನಿಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಅದಲ್ಲದೆ ರೈತರಿಗೆ ವಿಶೇಷ ಪ್ಯಾಕೇಜ್ ಘೊಷಣೆ ಮಾಡಲು ಆಗ್ರಹಿಸುತ್ತೆವೆ. ಒಂದು ವೇಳೆ ನಿರ್ಲಕ್ಷ್ಯ ತೋರಿದ್ದರೆ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಎಸ್ ಬಿ ಕೆಂಬೋಗಿ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ.