ಆಲಮಟ್ಟಿ-ಯಾದಗಿರಿ ರೈಲು ಮಾರ್ಗ: ಸರ್ವೆ ಕಾರ್ಯಕ್ಕೆ ಶೀಘ್ರವೇ ಟೆಂಡರ್
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಆಲಮಟ್ಟಿ- ಮುದ್ದೇಬಿಹಾಳ-ಹುಣಸಗಿ-ಯಾದಗಿರಿ ರೈಲು ಮಾರ್ಗದ ನಿರ್ಮಾಣದ ಸಲುವಾಗಿ ಸರ್ವೆ ನಡೆಸಲು ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಯಾದಗಿರಿ ಸಂಸದ ಕುಮಾರ ನಾಯಕ ಭರವಸೆ ನೀಡಿದ್ದಾರೆ.
ಆಲಮಟ್ಟಿ-ಮುದ್ದೇಬಿಹಾಳ-ಯಾದಗಿರಿ ಹೋರಾಟ ಸಮಿತಿಯ ಸದಸ್ಯ ಕಿರಣ ಪಾಟೀಲ ತಿಳಿಸಿದ್ದಾರೆ. ಯಾದಗಿರಿಯಲ್ಲಿ ಮಂಗಳವಾರ ಸಂಸದರನ್ನು ಭೇಟಿಯಾಗಿ ಸನ್ಮಾನಿಸಿ ಅವರೊಂದಿಗೆ ರೈಲು ಮಾರ್ಗದ ಪ್ರಗತಿಯ ಮಾಹಿತಿ ಕುರಿತು ಸಮಾಲೋಚನೆ ನಡೆಸಿದಾಗ ಈ ವಿಷಯವನ್ನು ಸಂಸದರು ತಿಳಿಸಿದ್ದಾರೆ ಎಂದು ಹೇಳಿದರು.ಕೇಂದ್ರದ ರೈಲ್ವೆ ಖಾತೆ ಸಚಿವ ಅಶ್ವಿನ ವೈಷ್ಣವ ಅವರೊಂದಿಗೆ ಖುದ್ದಾಗಿಮಾತನಾಡಿ ಈ ಮಾರ್ಗದ ಸರ್ವೆ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲು ವಿನಂತಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಯದಲ್ಲಿ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಸಮಿತಿ ಸದಸ್ಯರಾದ ಅರವಿಂದ ಲದ್ದಿಮಠ, ಪುಂಡಲೀಕ ಹಡಲಗೇರಿ,ಶಿವನಗೌಡ ಪಾಟೀಲ,ಸೇರಿದಂತೆ ಭಾಗವಹಿಸಿದ್ದರು.