ಇಂಡಿ: ಸಮಾಜದಲ್ಲಿನ ಆರ್ಥಿಕ ದುರ್ಬಲರ ಏಳಿಗೆಯನ್ನು ಗಮನದಲ್ಲಿರಿಸಿ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ಸಹಕಾರಿ ಸಂಸ್ಥೆಗಳು ಹುಟ್ಟಿಕೊಂಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಸಹಕಾರ ಇಲಾಖೆಯ ಅಧಿಕಾರಿ ವಿ.ಪಿ. ನಾಯಕ್ ತಿಳಿಸಿದರು.
ಶನಿವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ನಡೆದ ಸಂಘದ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅವರು ಮಾತನಾಡಿದರು.
ಜಾತಿ, ಮತ, ಬೇಧವಿಲ್ಲದೆ ಸಮಾಜದಲ್ಲಿನ ಆರ್ಥಿಕ
ದುರ್ಬಲರು ಖಾಸಗಿ ಲೇವಾದೇವಿದಾರ ಕಪಿ ಮುಷ್ಠಿಯಿಂದ ಪಾರು ಮಾಡುವ ದಿಸೆಯಲ್ಲಿ ಆರಂಭವಾದ ಬ್ಯಾಂಕ್ ಇದೀಗ ಪಟ್ಟಣದಲ್ಲಿ ಅತೀ ಹೆಚ್ಚು ವ್ಯವಹಾರದ ಮೂಲಕ ಜನಪ್ರೀಯವಾಗಿದೆ ಎಂದ ಅವರು ಜಾತಿ ಮತದ ತಾರತಮ್ಯವಿಲ್ಲದೆ ಅಗತ್ಯವಿರುವ ಗ್ರಾಹಕರಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದರು.
ಶ್ರೀ ಸಾಮಾನ್ಯರ ಬದುಕಿಗೆ ಆಸರೆಯಾಗಿರುವ ಸಹಕಾರಿ
ಸಂಘದ ಸರ್ವ ರೀತಿಯ ಸೌಲಭ್ಯದ ಪ್ರಯೋಜನ ಪಡೆದು ಸದೃಡವಾದ ಜೀವನವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದ ಅವರು, ಸದಸ್ಯರು ಕೇವಲ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೆ ಬ್ಯಾಂಕಿನ ಎಲ್ಲ ರೀತಿಯ ಕರ‍್ಯಚಟುವಟಿಕೆಯ ಬಗ್ಗೆ ಹೆಚ್ಚಿನ ಗಮನಹರಿಸಿ ಸೂಕ್ತ ಸಲಹೆಗಳನ್ನು ನೀಡಿ ಬ್ಯಾಂಕಿನ ಅಭಿವೃದ್ದಿಯಲ್ಲಿ ಪಾತ್ರವಹಿಸುವಂತೆ ತಿಳಿಸಿದರು.
ಮುಖ್ಯ ಅಥಿತಿಯಾಗಿ ಮಾತನಾಡಿದ ಕಾಂಗ್ರೇಸ್ ಮುಖಂಡ ಸತೀಶ ಕುಂಬಾರ ಸಂಸ್ಥೆ ಆರಂಭದಿಂದ ಸಮಾಜದಲ್ಲಿನ ಆರ್ಥಿಕ ದುರ್ಬಲರನ್ನು ಐದು, ಹತ್ತು ರೂಪಾಯಿ, ಬಡ್ಡಿಯ ವಿಷವರ್ತುಲದಿಂದ ಪಾರುಮಾಡುವಲ್ಲಿ ಸಹಕಾರಿಯಾಗಿದೆ ಎಂದರು.
ಸದಸ್ಯರು ಕೇವಲ ಮಹಾಸಭೆಗೆ ಮಾತ್ರಸೀಮಿತವಾಗದೆ ಕಾಲಕಾಲಕ್ಕೆ ಆಡಳಿತ ಮಂಡಳಿಯ ಜತೆ ಸಂಪರ್ಕ ಹೊಂದಿ ಕುಂದುಕೊರತೆ ನ್ಯೂನ್ಯತೆ ಬಗ್ಗೆ ಗಮನಸೆಳೆದು ಪರಿಹರಿಸಿಕೊಳ್ಳಲು ತಿಳಿಸಿದರು.
ಬ್ಯಾಂಕಿನ ಗೌರವಾಧ್ಯಕ್ಷ ಮಂಜುನಾಥ ಕಾಮಗೊಂಡ
ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ೬೬ ಲಕ್ಷ ಠೇವಣಿ ಸಂಗ್ರಹಿಸಿ ೧.೪೫ ಕೋಟಿ ಸಾಲ ವಿತರಿಸಲಾಗಿದೆ. ಈಗಾಗಲೆ ದೇವರಹಿಪ್ಪರಗಿಯಲ್ಲಿ ಶಾಖೆ ತೆರೆದಿದ್ದು ಮುಂದೆ ಇನ್ನಷ್ಟು ಶಾಖೆಗಳನ್ನು ತೆರೆದು ದುಡಿಯುವ ಕೈಗಳಿಗೆ ಕೆಲಸ ನೀಡುವ ಜೊತೆಗೆ ಸಾಮಾನ್ಯ ಜನರಿಗೆ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಳೆದ ಮಹಾಸಭೆಯ ನಡಾವಳಿ,
ಬ್ಯಾಂಕಿನ ಲಾಭ ನಷ್ಟ ಹಾಗೂ ವಿವರವನ್ನು ಬ್ಯಾಂಕಿನ
ಕ್ಲಾರ್ಕ ಶ್ರಿಕಾಂತ ಗಡಗಲಿ ಸಭೆಯಲ್ಲಿ ಮಂಡಿಸಿದರು.
ವೇದಿಕೆಯಲ್ಲಿ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ
ಯಲಗೊಂಡ ಬೇವನೂರ, ಸತೀಶ ಝಂಪಾ, ವಿದ್ಯಾಶ್ರೀ
ಪಾಟೀಲ್ ಇದ್ದರು. ಸಭೆಯಲ್ಲಿ ಸಂಸ್ಥೆಯ ಗೌರವಕಾರ್ಯದರ್ಶಿ ಶಿವಾನಂದ ಮಠಪತಿ, ನಿರ್ದೇಶಕ ವಿಠ್ಠಲ ಪಟ್ಟಣ, ರಮೇಶ ಹತ್ತಿ, ಮಾಂತೇಶ ಮುಡಕೆ, ಚಂದ್ರಾಮ ಮೇಡೆದಾರ, ಬವರಾಜ ದಶವಂತ, ಸಿಧಾರ್ಥ ಅರಳಿ, ಸದಸ್ಯರಾದ ಮಲ್ಲಿಕಾರ್ಜುನ ಹವಿನಾಳಮಠ, ಅಶ್ವಿನಿ ಮುಳಜಿ, ರಾಜಕುಮಾರ ನಾಯ್ಕೋಡಿ,
ಸಂಗಮೇಶ ಗಲಗಲಿ, ಸಚೀನ ಮೇಡೆದಾರ, ದೂಳಪ್ಪ
ಜಿಡ್ಡಿಮನಿ, ಸಚೀನ ದೇವಣಗಾಂವ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕಿನ ವ್ಯವಸ್ಥಾಪಕ ಅಶೋಕ ಬಳಬಟ್ಟಿ ಸ್ವಾಗತಿಸಿ,
ವಂದಿಸಿದರು.