ತೊಗರಿಗೆ ಗೊಡ್ಡು ರೋಗ ನಿರ್ವಹಣೆಗೆ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಸಲಹೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ಕೆಲವೆಡೆ ತೊಗರಿ ಬೆಳೆಗೆ ಗೊಡ್ಡು ರೋಗ ಕಾಣಿಸಿಕೊಂಡಿದೆ. ತೊಗರಿ ಬೆಳೆಗೆ ಈ ರೋಗ ಬರಲು ಪಿಜನ್ ಪೀ ಸ್ಟರಿಲಿಟಿ ಮೊಸಾಯಿಕ್ ವೈರಸ್ (ಪಿಪಿಎಸ್ ಎಂ) ಕಾರಣವಾಗಿದ್ದು ಇದನ್ನು ಇದನ್ನು ಏರಿಯೋಫಿಡ್ ಎಂಬ ಮೈಟ್ ನುಶಿ ಹರಡಿಸುತ್ತದೆ. ಬಾಧಿತ ಜಮೀನುಗಳ ರೈತರು ಕೂಡಲೇ ನಿವಾರಣೋಪಾಯ ಕ್ರಮಗಳನ್ನು ಕೈಗೊಂಡು ರೋಗ ನಿಯಂತ್ರಿಸಬೇಕು ಎಂದು ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ತಿಳಿಸಿದರು.
ತಾಲ್ಲೂಕಿನ ಸರೂರ ಗ್ರಾಮದ ಈರಯ್ಯ ಹಿರೇಮಠ, ಸಂತೋಷ್ ನಾಯ್ಯೋಡಿ, ಶಂಕ್ರಪ್ಪ ನಾಯೋಡಿ, ಯಮನಪ್ಪ ನಾಯ್ಯೋಡಿ, ಸಿದ್ದಪ್ಪ ಬಪ್ಪರಗಿ, ಯಲ್ಲಪ್ಪ ಬಪ್ಪರಗಿ ಇವರ ಜಮೀನುಗಳಿಗೆ ಭೇಟಿ ಬೆಳೆಯಲ್ಲಿ ಕಾಣಿಸಿಕೊಂಡಿರುವ ಗೊಡ್ಡು ರೋಗ ಪರಿಶೀಲಿಸಿದ ನಂತರ ಗೊಡ್ಡುರೋಗದ
ಲಕ್ಷಣಗಳ ಕುರಿತು ಅವರು ಮಾತನಾಡಿದ ರೋಗ ಬಂದ ಗಿಡಗಳು ಸಣ್ಣ ಗಾತ್ರದಲ್ಲಿರುತ್ತವೆ. ಮೇಲ್ಬಾಗದಲ್ಲಿ ತಿಳಿ ಮತ್ತು ದಟ್ಟ ಹಳದಿ ಬಣ್ಣದ ಮೋಸಾಯಿಕ್ ತರಹದ ಮಚ್ಚೆಗಳನ್ನು ಹೆಚ್ಚಿನ ಸಂಖ್ಯೆಯ ಎಲೆಗಳನ್ನು ಹೊಂದಿದ್ದರೂ ಹೂ ಕಾಯಿಗಳಿಲ್ಲದೇ ಮುದುರಿಕೊಂಡಿರುತ್ತವೆ. ಗೊಡ್ಡಾಗಿ ಉಳಿಯುತ್ತವೆ.
ಬೆಳೆಯ ಎಳೆಯ ವಯಸ್ಸಿನಲ್ಲಿ ಈ ರೋಗ ಬಂದರೆ ಕಾಂಡವು ಉದ್ದವಾಗಿ ಬೆಳೆಯದೆ ಸಣ್ಣ ಟೊಂಗೆಗಳು ಹಾಗೂ ತಿಳಿ ಹಳದಿ ಬಣ್ಣದ ಚಿಕ್ಕ ಗಾತ್ರದ ಮುಟುರಿಕೊಂಡಿರುವ ಎಲೆಗಳ ಗುಂಪಿನಿಂದ ಕೂಡಿ ಪೊದೆಯಂತಾಗಿ ಗೊಡ್ಡು ಆಗುತ್ತದೆ. ಈ ರೋಗವು ಶೇ.30 ಇಳುವರಿ ಹಾನಿ ಮಾಡುತ್ತದೆ ಎಂದು ಹೇಳಿದರು.
ನಂತರ ರೋಗ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ರೋಗ ತಗುಲಿದ ಗಿಡಗಳನ್ನು ಕಿತ್ತು ನಾಶ ರೋಗಾಣುವಿನ ಆಸರೆ ಸಸ್ಯಗಳಾದ ಬಹು ವಾರ್ಷಿಕ ತೊಗರಿ ಮುತ್ತು ಕೊಳೆ ಬೆಳೆಯನ್ನು ಕಿತ್ತು.ನುಶಿ ನಾಶಮಾಡಬೇಕು. ನಾಶಕಗಳಾದ 1.5 ಆಕ್ಸಿಡೆಮಟಾನ್ ಮಿಥೈಲ್ (50ಇಸಿ), ಎಂ ಎಲ್ ಅಥವಾ ಸ್ಟೇರೋಮಿಸಿಫನ್ ( ಶೇ.22.9ಎಸ್‌ಸಿ) ಅಥವಾ ಫೇನಜಾನ್ 01 ಎಂಲ್ ಪ್ರತಿ ಬೆರೆಸುವುದರೊಂದಿಗೆ ನೀರಿಗೆ ನೀರಿನಲ್ಲಿ ಕರಗುವ ಎನ್‌ಪಿಕೆ 19:19:19 ಅನ್ನು ಪ್ರತಿ ಲೀಟರ್‌ಗೆ 05 ಗ್ರಾಂನಂತೆ ಹಾಕಿ ಬೆಳೆಗೆ ಸಿಂಪಡಿಸಬೇಕು. ಅವಶ್ಯಕತೆ ಇದ್ದಲ್ಲಿ 15 ದಿನಗಳ ನಂತರ ಮತ್ತೊಮ್ಮೆ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಶ್ರೀಶೈಲ ಪೂಜಾರಿ, ಜಮೀನುಗಳ ರೈತರು ಸೇರಿದಂತೆ ಉಪಸ್ಥಿತರಿದ್ದರು.