ಇಂಡಿ : ಝಳಕಿ ಗ್ರಾಮದಲ್ಲಿ ಅಗ್ನಿಪಥ್ ತರಬೇತಿ ಕೇಂದ್ರ ತೆರೆಯಲು ನೂರಾರು ಯುವಕರು ಹಾಗೂ ಗ್ರಾ.ಪ ಅಧ್ಯಕ್ಷ ಸಣ್ಣಪ್ಪ ತಳವಾರ ಎಡಿಜಿಪಿ ಅಲೋಕಕುಮಾರ ಅವರಿಗೆ ಮನವಿ ಸಲ್ಲಿಸಿದರು. ಇಂಡಿ ತಾಲ್ಲೂಕಿನ ಝಳಕಿ ಗ್ರಾಮಕ್ಕೆ ಎಡಿಜಿಪಿ ಅಲೋಕಕುಮಾರ ಬೇಟಿ ನೀಡಿದಾಗ, ಗ್ರಾ.ಪ ಅಧ್ಯಕ್ಷ ಮನವಿ ಸಲ್ಲಿಸಿ ಮಾತಾನಾಡಿದ ಅವರು, ಗಡಿ ಭಾಗದ ಯುವಕರಿಗೆ ಇಲಾಖೆಯ ತರಬೇತಿ ಅವಶ್ಯಕ ವಾಗಿದೆ.ಅನಾವಶ್ಯಕವಾಗಿ ನಮ್ಮ ಭಾಗದ ಹೆಸರು ಅಪಸ್ವರದಲ್ಲಿ ಮುಳುಗಿ ಹೋಗಿದೆ. ಇಲ್ಲಿನ ಗಡಿಭಾಗದ ಯುವಕರಿಗೆ ಶಿಕ್ಷಣ ಸಂಸ್ಕಾರದ ಜೊತೆಗೆ ರಾಷ್ಟ್ರ ಪ್ರೇಮದ ಮೂಡಿಸುವುದು ಅವಶ್ಯಕ ವಾಗಿದೆ ಎಂದರು. ಈ ಸಂದರ್ಭದಲ್ಲಿ ಸ್ಪಂದಿಸಿ ಮಾತನಾಡಿದ ಎಡಿಜಿಪಿ ನಮ್ಮ ಇಲಾಖೆಯಿಂದ ಉಚಿತ ತರಬೇತಿ ಕೇಂದ್ರ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ತರಬೇತಿ ಕೇಂದ್ರ ತೆರೆಯುತ್ತವೆ ಎಂದು ಹೇಳಿದರು. ಭೀಮಾತೀರ ಎಂಬ ಕುಖ್ಯಾತಿ ಅಳಸಿ ಹಾಕಲು ಪ್ರತಿಯೊಬ್ಬರೂ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಈ ಭಾಗದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿ ಮಾಡಲು ಪ್ರತಿಯೊಬ್ಬರ ಶ್ರಮ ಅವಶ್ಯಕ ಎಂದು ಹೇಳಿದರು.