ಸಕಾರಾತ್ಮಕ ಆಲೋಚನೆ ಮೈಗೂಡಿಸಿಕೊಳ್ಳಿ
ಇಂಡಿ : ಪರಿವರ್ತನೆ ಜಗದ ನಿಯಮ, ಜಗತ್ತು ಬದಲಾದಂತೆ ನಾವು ಬದಲಾಗಬೇಕು.ಇಲ್ಲದಿದ್ದರೆ ಜೀವನ
ಜಡತ್ವಕ್ಕೆ ಸಿಲುಕುತ್ತದೆ.ನೈತಿಕತೆ ಕೆಳಮಟ್ಟಕ್ಕೆ ಇಳಿಯುತ್ತಿದೆ. ಮನೆಗಳು ದೊಡ್ಡದಾಗುತ್ತಿದ್ದು ಮನಸ್ಸುಗಳು
ಸಣ್ಣದಾಗುತ್ತಿವೆ ಎಂದು ಬ್ರಹ್ಮಕುಮಾರಿ ವಿವಿಯ
ರಾಜಯೋಗಿನಿ ಯಮುನಾ ಅಕ್ಕಾ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿ ಯಲ್ಲಿ
ಯಮುನಾ ಅಕ್ಕಾ ಮತ್ತು ಸಂಗಡಿಗರಿಂದ ಲೋಕ
ಕಲ್ಯಾಣಕ್ಕಾಗಿ 21 ದಿನಗಳ ಮೌನ ವೃತದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು. ಬ್ರಹ್ಮಕುಮಾರಿ ಶ್ರೀದೇವಿ ಅಕ್ಕನವರು ಮಾತನಾಡಿ ಪ್ರಸ್ತುತ ಜಗತ್ತು ಬದಲಾವಣೆಯ ದಿಕ್ಕಿನಲ್ಲಿ ಮುನ್ನುಗುತ್ತಿದ್ದು ಮನಸ್ಸಿನ ನಿಯಂತ್ರಣ ತಪ್ಪುತ್ತಿದೆ. ಕ್ಷಣಿಕ ಸುಖಕ್ಕೆ ಇಡೀ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ
ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿ
ಕೋಳ್ಳಬೇಕಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ, ಪ್ರೊ ಎಂ.ಜೆ. ಪಾಟೀಲ, ಶಿವಲಿಂಗಪ್ಪ ಪಟ್ಟದಕಲ್ಲ ಮೌನ ವೃತದ ಕುರಿತು ಮಾತನಾಡಿದರು. ವಿಶ್ವನಾಥ ಜಾಮಗೊಂಡಿ, ಅರವಿಂದ ಕಠಾರೆ,ರಾಜಶ್ರೀ ಕೋಳೆಕರ, ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ಲಲಿತಾ ಹೂಗಾರ, ಸಾವಿತ್ರಿ ಜಾಮಗೊಂಡಿ, ಉಮಾ ಪಟ್ಟದಕಲ್ಲ, ಪವಿತ್ರಾ ವಾಲಿ ,ಸುಮಾ ಪತಂಗಿ, ವಿದ್ಯಾಶ್ರೀ ಪಾಟಿಲ, ಜಯಶ್ರೀ ಪತ್ತಾರ, ದ್ರಾಕ್ಷಾಯಿಣಿ ಮೈದರಗಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯಲ್ಲಿ ಮೌನ ವೃತ ಮಾಡಿದ ನಿಮಿತ್ಯ ಯಮುನಾ ಅಕ್ಕಾ ಇವರನ್ನು ಸನ್ಮಾನಿಸಿದರು.