ಅಫಜಲಪುರ :ತಾಲೂಕಿನ ಅಳ್ಳಗಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳುಗಳ ಕಾಲ ಪ್ರತಿದಿನ ನಾಗಲಿಂಗಯ್ಯ ಶಾಸ್ತ್ರಿಗಳಿಂದ ಪುರಾಣ ಕಾರ್ಯಕ್ರಮ ನಡೆಯಿತು. ಶ.ಭ್ರ.ಶಾಂತಲಿಂಗ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಮಠದ ಮಠಾಧಿಶರಾದ ಶಾಂತಲಿಂಗ ಶಿವಾಚಾರ್ಯರು,
ಮಂಗಳವಾರ ಸಾಯಂಕಾಲ 6 ಗಂಟೆಗೆ ಶಾಂತಿಲಿಂಗ ಶಿವಾಚಾರ್ಯರ ಕಲ್ಲುಸಕ್ಕರೆಯ ತುಲಾಭಾರ ಸಾವಿರಾರು ಭಕ್ತ ಸಮೂಹದ ಮಧ್ಯೆ ಅದ್ದೂರಿಯಾಗಿ ಜರುಗಲಿದ್ದು,ಅದೇ ರೀತಿಯಾಗಿ ಬರುವ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಮದ್ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುವುದು ಎಂದು ತಿಳಿಸಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುತ್ತೈದೆಯರ ಕಳಸಾರೋಹಣದೊಂದಿಗೆ ಹಲವು ವಾದ್ಯಗಳೊಂದಿಗೆ ಅದ್ದೂರಿಯಾಗಿ ಜರಗುವುದೆಂದು ತಿಳಿಸಿದರು.
ನಂತರ ಮಾತನಾಡಿದ ಪುರಾಣ ಪ್ರವಚನಕಾರರಾದ ನಾಗಲಿಂಗಯ್ಯ ಶಾಸ್ತ್ರಿಗಳು, ಅಳ್ಳಗಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಶ್ರಾವಣ ಮಾಸದ ನಿಮಿತ್ಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತ ಬಂದಿದ್ದು, ಗ್ರಾಮದಲ್ಲಿ ಎಲ್ಲಾ ಜನರು ಪ್ರತಿನಿತ್ಯ ಪುರಾಣ ಕಾರ್ಯಕ್ರಮ ಆಲಿಸಿದ್ದು ಸಂತಸ ತಂದಿದೆ. ನಾಳೆ ನಡೆಯುವ ಕಾರ್ಯಕ್ರಮಕ್ಕೆ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆಯಬೇಕು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಾನಾಗೌಡ ಪೊಲೀಸ್ ಪಾಟೀಲ, ಸಾಯಬಗೌಡ ಪಾಟೀಲ ಸೇರಿದಂತೆ ಸಮಸ್ತ ಅಳ್ಳಗಿ ಗ್ರಾಮಸ್ಥರು ಉಪಸ್ಥಿತರಿದ್ದರು.