ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಿ, ಇಲ್ಲವಾದರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ..!
ಅ-26 ರಂದು ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಲು ಎಸಿ ಅವರಿಗೆ ಮನವಿ : ಅಖಂಡ ಕರ್ನಾಟಕ ರೈತ ಸಂಘ..
ಇಂಡಿ : ಜನ ಜಾನುವಾರುಗಳ ನೀರು ಕುಡಿಯುವ ಹಾಗೂ ಒಣಗುತ್ತಿರುವ ಬೆಳೆಗಳ ಸಲುವಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಕಂದಾಯ ಉಪವಿಭಾಗ ಅಧಿಕಾರಿಗಳಿಗೆ ಅ.26 ರಂದು ಬೆಳಿಗ್ಗೆ 10:30 ಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಖಂಡ ಕರ್ನಾಟಕ ಸಂಘದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡಿ ತಾಲೂಕು ಬಹುತೇಕ ನಿರಂತರವಾಗಿ ಕೆಟ್ಟ ಬರಗಾಲ ಅನುಭವಿಸುವ ಪ್ರದೇಶವಾಗಿದೆ. ಅದರಂತೆ ಈ ಬಾರಿ ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ಕೈ ಕೊಟ್ಟು ಬೀಕರ ಬರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬರದ ಛಾಯೆಯಿಂದ ಕೊಳವೆ ಬಾವಿ, ತೆರದ ಬಾವಿ ನೀರಿಲ್ಲದೆ ನೆಲ ಕಚ್ಚಿವೆ.ಆದರೆ ಸುಮಾರು ಹತ್ತು ವರ್ಷಗಳ ಕಾಲ ಕಷ್ಟು ಪಟ್ಟು ಬೆಳೆದ, ಫಲಕೊಡುವ ಲಿಂಬೆ, ದಾಳಿಂಬೆ ಮತ್ತು ಕೃಷಿ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಇಂತಹ ತೋಟಗಾರಿಕೆ ಬೆಳೆ ಸುಮಾರು ಹತ್ತಾರು ವರ್ಷ ಫಲವಿಲ್ಲದೆ ಮಗುವಿನಂತೆ ಜೋಪಾನ ಮಾಡಿ ಬೆಳೆಯಬೇಕು. ಆದರೆ ರೈತ ಇಂತಹ ಬೆಳೆಗಳನ್ನು ಕಳೆದುಕೊಳ್ಳುವ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದೆವೆ. ಆ ಕಾರಣಕ್ಕಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಬೇಕಾಗಿದೆ. ಈ ಕಾಲುವೆಗೆ ಸಿಂದಗಿ ತಾಲ್ಲೂಕಿನ ಭಾಗದವರೆಗೆ ನೀರು ಹರಿದು ಕೊನೆಯ ಭಾಗದವರೆಗೆ ನೀರು ಹರಿಯುವುದಿಲ್ಲ. ಅದರಲ್ಲೂ ತಾಂಬಾ, ಗೊರನಾಳ, ಬೊಳೆಗಾಂವ, ಹಿರೇರೂಗಿ, ಇಂಡಿ, ಹಂಜಗಿ, ತಡವಲಗಾ, ಅಂಜುಟಗಿ ಮುಂತಾದ ಗ್ರಾಮಗಳಿಗೆ ನೀರು ಬಂದಿರುವುದಿಲ್ಲ. ಆದ್ದರಿಂದ ಜನ ಜಾನುವಾರುಗಳಿಗೆ ಮತ್ತು ಬೆಳೆಗಳಿಗೆ ನೀರಿನ ಸಮಸ್ಯೆ ಯಾಗದಂತೆ ಕಾಲುವೆಗೆ ನೀರು ಹರಿಸಬೇಕು . ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಅಕ್ಟೋಬರ್-30 ರಂದು
ರಾಜ್ಯ ಹೆದ್ದಾರಿ ತಡೆದು ರೂಗಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ಮನವಿ ಸಲ್ಲಿಸುತ್ತೆವೆ ಎಂದು ತಿಳಿಸಿದರು.