ಬೆಳಗಾವಿ : ಎಲ್ಲಾ ಜಿಲ್ಲೆಯ ಸಂಘಟನೆಯ ಬಲವರ್ಧನೆಯ ಜೊತೆಗೆ ದಲಿತರ ಕುಂದು ಕೊರತೆಗಳನ್ನು ಆಲಿಸುವುದರ ಜೊತೆಗೆ ತುಳಿತಕ್ಕೆ ಒಳಗಾದವರ ಜೊತೆ ಜೊತೆಯಲ್ಲಿ ನಾವು ಸಂಘಟನೆಯ ಕಾರ್ಯಕರ್ತರು ನಿಲ್ಲುವ ನಿಟ್ಟಿನಲ್ಲಿ ಹೋರಾಟ ಮೂಲಕ ನ್ಯಾಯಯುತ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಈ ರಾಜ್ಯದ ನೊಂದವರ ಧ್ವನಿಯಾಗಿ ಪ್ರಾಮಾಣಿಕ ಹೋರಾಟವನ್ನು ಮುಂದುವರೆಸಿಕೊಂಡು ಹೊಗುವಂತೆ ರಾಜ್ಯದ ಎಲ್ಲಾ ಸದಸ್ಯರಿಗೆ ರಾಜ್ಯ ಸಂಚಾಲಕರಾದ ಪರಶುರಾಮ ನೀಲನಾಯಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಮಿತಿ ಕರೆದ ಬೆಳಗಾವಿ ವಿಭಾಗ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಯ ಸಂಘಟನೆಯ ಜಿಲ್ಲಾ ತಾಲೂಕು ಸಂಚಾಲಕರು, ಸಂಘಟನಾ ಸಂಚಾಲಕರು, ಮಹಿಳಾ ಸಂಚಾಲಕರು, ರಾಜ್ಯ ಸಮಿತಿ ಸದಸ್ಯರು ಬಾಗಿಯಾಗಿ ಮುಂಬರುವ ದಿನಗಳಲ್ಲಿ ಸಂಘಟನೆಯ ಬಲವರ್ಧನೆಗಾಗಿ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ನೌಕರ ಸಘದ ರಾಜ್ಯ ಸಂಚಾಲಕರಾದ, ಬಸವರಾಜ ರಾಯವಗೌಳ, ರಾ ಸಂ ಸಂಚಾಲಕರಾದ ಸಂಜೀವ ಕಾಂಬಳೆ, ರವಿ ಬಿಸ್ತವಡಕರ್, ಪರಶುರಾಮನು ಠೋಣಪೆ, ಶಾಮ ಕಾಳೆ,ಹೀಗೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಈ ಸಭೆಯಲ್ಲಿ ಬಾಗಿಯಾಗಿದ್ದರು…