ಹಾಡಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಕ್ರಮ : ನವೀನ್ ಮಠದ್
ಹನೂರು : ಹಾಡಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನವೀನ್ ಮಠದ್ ಹೇಳಿದರು.
ತಾಲೂಕಿನ ಆಲಂಬಾಡಿ, ಪಾಲಾರ್ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಬಾಕಿ ಅರ್ಜಿ ವಿಚಾರಣೆ ನಡೆಸಿ ಉಪ ವಿಭಾಗ ಮಟ್ಟಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು ಇದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಿ ಪಡಿಸದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.
ವಿದ್ಯುತ್ ಸಂಪರ್ಕ : ಈಗಾಗಲೇ ಅರಣ್ಯ ಭಾಗದಲ್ಲಿರುವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮೋದನೆ ಸಿಗುವ ವಿಶ್ವಾಸವಿದ್ದು ಅನುಮೋದನೆ ಸಿಕ್ಕ ಕೂಡಲೇ ವಿದ್ಯುತ್ ಸಂಪರ್ಕ ಮಾಡಲಾಗುವುದು ಎಂದರು.
ಶಿಕ್ಷಣಕ್ಕೆ ಒತ್ತು ನೀಡಿ : ಶಾಲೆಗಳಿಗೆ ಮಕ್ಕಳನ್ನು ಕಲಿಸುವ ಮೂಲಕ ಹೆಚ್ಚು ಒತ್ತನ್ನು ನೀಡಬೇಕು ನಿಮಗಾಗಿ ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭವಾಗಿದ್ದು ಮಕ್ಕಳನ್ನು ಶಾಲೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು ಎಂದರು.
ಇದೆ ಸಂದರ್ಭದಲ್ಲಿ ಸಂಯೋಜಕ ಮಹದೇವಸ್ವಾಮಿ, ತಾಲೋಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಗಿರಿಯ,ಮುಖಂಡರಾದ ಸಣ್ಣ ಮಾದೇಗೌಡ, ಮಾಸ್ತಮ್ಮ, ಸಣ್ಣಪ್ಪ, ಮಾದಪ್ಪ, ಮುತ್ತಯ್ಯ, ಭದ್ರ,ವೆಂಕಟ ಲಕ್ಷಮ್ಮ, ಕಾಳಮ್ಮ ಮುಂತಾದವರು ಇದ್ದರು.