ಇಂಡಿ: ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳು ಹಾಗೂ ಸಾಗವಾನಿ ಕಟ್ಟಿಗೆ ಬೆಂಕಿಗಾಹುತಿ ಆಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಅಂಗಡಿಗಳಲ್ಲಿದ್ದ ಸುಮಾರು ಒಂದು ಕೋಟಿ ಬೆಲೆ ಬಾಳುವ ಯಂತ್ರಗಳು ಹಾಗೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ಹಾನಿಯಾಗಿದೆ. ಶಾಂತಪ್ಪ ಬಡಿಗೇರ, ಬಸವರಾಜ, ಸಂಗು, ಮಲ್ಲಿಕಾರ್ಜುನ ಬಡಿಗೇರ, ಸಂತೋಷ ಬಡಿಗೇರ ಎಂಬುವವರಿಗೆ ಸೇರಿದ ಐದು ಅಂಗಡಿಗಳು ಹಾನಿಯಾಗಿದೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.