ಇಂಡಿ : ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎರಡು ಅಂಗಡಿಗಳು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಗರಖೇಡ ರಸ್ತೆಯಲ್ಲಿ ನಡೆದಿದೆ. ಭಾಷಾ ಮೇಸ್ತ್ರಿ ಹಳ್ಳಿಕರ ಸರ್ವಿಸಿಂಗ್ ಗ್ಯಾರೇಜ್ ಹಾಗೂ ಪಕ್ಕದಲ್ಲಿರುವ ಮಂಜುನಾಥ ಅಗಸರ ಇಸ್ತ್ರಿ ಅಂಗಡಿ ಭಸ್ಮವಾಗಿದೆ. ಅಲ್ಲದೇ, ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದರು.
ಇಂಡಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.