4 ಜನ ಯುವಕರ ದುರ್ಮಣ..! ಹೇಗೆ..?
ವಿಜಯಪುರ : ಹೈವೇ ಪಕ್ಕ ನಿಂತವರ ಮೇಲೆ ಅಪರಿಚಿತ ಲಾರಿ ಹರಿದು ಹೋಗಿರುವ ಪರಿಣಾಮ ಸ್ಥಳದಲ್ಲೆ ನಾಲ್ವರು ಬೈಕ್ ಸವಾರರ ಅಸುನೀಗಿರುವ ಘಟನೆ ವಿಜಯಪುರ ನಗರದ ಹಿಟ್ನಳ್ಳಿ ಟೋಲ್ ನಾಕಾ ಬಳಿ ನಡೆದಿದೆ. ಊಟಕ್ಕೆ ಹೋಗಿದ್ದ ಯುವಕರಾದ ಶಿವಾನಂದ ಚೌಧರಿ, ಸುನೀಲ ಖಾನಾಪೂರ, ಈರಣ್ಣ ಕೋಲಾರ, ಪ್ರವೀಣ ಪಾಟೀಲ್ ಮೃತಪಟ್ಟಿದ್ದಾರೆ.
ಮೃತರು ವಿಜಯಪುರ ನಗರದ ವಜ್ರ ಹನುಮಾನ ನಗರದ ವಾಸಿಗಳು. ಬೈಕ್ ಸಮೇತ ಹೈವೇ ಪಕ್ಕ ಬದಿಗೆ ನಿಂತಾಗ ಯುವಕರ ಮೇಲೆ ಲಾರಿ ಹರಿದಿದೆ. ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳ ಸಂಚಾರಿ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.