ಅಫಜಲಪುರ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಅಫಜಲಪುರ ಬಿಇಓ ಎಚ್ ಎಸ್ ದೇಶಮುಖ್ ಬಲೆಗೆ ಬಿದ್ದ ಘಟನೆ ನಡೆದಿದೆ. ಅನುದಾನಿತ ಶಾಲೆಯ ಸ್ಯಾಲರಿ ಮಾಡೋದಕ್ಕೆ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ತಿಪ್ಪಣ್ಣ ಕಂಠೆಪ್ಪ ಹೇರೂರ್ ಸರಕಾರಿ ಅನುದಾನಿತ ಶಾಲೆ ಮುಖ್ಯೋಪಾಧ್ಯಾಯರ ಬಳಿ ಕಳೆದೆರಡು ತಿಂಗಳಿಂದ ಆರು ಲಕ್ಷ ಸ್ಯಾಲರಿ ಮಾಡೋದಕ್ಕೆ ಬಿಇಓ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅನುದಾನಿತ ಶಾಲೆಯ ಹೆಡ್ ಮಾಸ್ಟರ್ ರಾಜಶೇಖರ್ ಖಿಲಾರಿ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು. ಅಫಜಲಪುರದಿಂದ ಬಂದು ಕಲಬುರಗಿಯ ಹೊಟೇಲ್ ಬಳಿ 15 ಸಾವಿರ ಹಣ ಪಡೆಯುವಾಗ ಎಸಿಬಿ ಬಲೆಗೆ ಬಇಓ ಸಿಕ್ಕಿ ಬಿದ್ದಿದ್ದಾನೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.