ಅಬ್ಬಬ್ಬಾ..! ಬೆಂಗಳೂರಿನಲ್ಲಿ ಜಾಬ್ ಮೇಳ, ಯಾವಾಗ ಗೊತ್ತಾ..?

Voice of janata Desk News : ಬೆಂಗಳೂರು : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಪ್ರೆಸಿಡೆನ್ಸಿ ಫೌಂಡೇಶನ್ ದೊಂದಿಗೆ ಮುಂಬರುವ ಶನಿವಾರ ದಿನಾಂಕ 15-02-2025 ರಂದು ನಗರದ ಖುದ್ದೂಸ್ ಸಾಹೇಬ್ ಈದ್ಧಾ ಮೈದಾನ, ಮಿಲ್ಲರ್ಸ್ ರಸ್ತೆ ಬೆಂಗಳೂರಿನಲ್ಲಿ ಮೇಗಾ ಜಾಬ್ ಮೇಳವನ್ನು ಆಯೋಜಿಸಲಾಗಿರುತ್ತದೆ. ಇದರಲ್ಲಿ ರಾಷ್ಟ್ರದ ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದಾರೆ. ರಾಜ್ಯದ ನಿರುದ್ಯೋಗಿ ಅಲ್ಪಸಂಖ್ಯಾತರಿಗೆ ಸುವರ್ಣ ಆವಕಾಶವಾಗಿರುತ್ತದೆ. ಸದರಿ ದಿನಾಂಕದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇದರಲ್ಲಿ ಪಾಲುಗೊಂಡು ಉದ್ಯೋಗವಕಾಶವನ್ನು ಸದುಪಯೋಗಿಸಿಕೊಳ್ಳಲು ಕೋರಲಾಗಿದೆ. ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಬೆಂಗಳೂರು ಇವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















