ಅಬ್ಬಬ್ಬಾ..! ಬಾರಿ ಪ್ರಮಾಣದ ಚಿನ್ನ ಕಳ್ಳತನ..! ಎಲ್ಲಿ..?
ವಿಜಯಪುರ : ಪಾಸ್‌ಪೋರ್ಟ್ ಕೆಲಸಕ್ಕಾಗಿ ಹುಬ್ಬಳ್ಳಿಗೆ ಹೋದಾಗ ಮನೆಯ ಕೀಲಿ ಮುರಿದು ಲಕ್ಷಾಂತರ ಮೌಲ್ಯದ ಚಿನ್ನವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ರಾಮಕೃಷ್ಣ ಲೇಔಟ್‌ನಲ್ಲಿ ನಡೆದಿದೆ. ಸುರೇಶ ಮಸಳಿ ಎಂಬುವವರ ಮನೆಯಲ್ಲಿ ಕಳ್ಳತನ ಆಗಿದೆ. ಮನೆಯಲ್ಲಿದ್ದ 11 ಲಕ್ಷದ 75 ಸಾವಿರ ಮೌಲ್ಯದ 400 ಗ್ರಾಂ ಚಿನ್ನ ಹಾಗೂ 40 ಸಾವಿರ ಮೌಲ್ಯದ 1000 ಗ್ರಾಂ ಬೆಳ್ಳಿ ಸೇರಿದಂತೆ 12 ಲಕ್ಷ 15 ಸಾವಿರ ಮೌಲ್ಯದ ವಸ್ತುಗಳು ಕಳ್ಳತನ ಆಗಿದೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















