ನಗರದ ದೇಶ ರಕ್ಷಕರ ಪಡೆ ಕಛೇರಿಯಲ್ಲಿ ಯುವ ಘಟಕದ ಸಭೆ ಹಾಗೂ ನೂತನ ಪದಾಧಿಕಾರಿಗಳ ನೇಮಕ
ವಿಜಯಪುರ : ನಗರದ ದೇಶ ರಕ್ಷಕರ ಪಡೆ ಕಛೇರಿಯಲ್ಲಿ ಯುವ ಘಟಕದ ಸಭೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಯುವ ಘಟಕದ ಅಧ್ಯಕ್ಷರಾದ ಆದಿತ್ಯ ಬಡಿಗೇರ, ಕಳೆದ ಐದು ವರ್ಷಗಳಿಂದ ನಾನು ದೇಶ ರಕ್ಷಕರ ಪಡೆಯ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು, ನನ್ನಲ್ಲಿರುವ ಉತ್ಸಾಹ ನೋಡಿ ನನ್ನನ್ನು ಯುವ ಘಟಕದ ಅಧ್ಯಕ್ಷನನ್ನಾಗಿ ಆಯ್ಕೆಮಾಡಿದರು. ಯುವ ಘಟಕದ ಅಧ್ಯಕ್ಷನಾಗಿ ನಾನು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ನಮ್ಮ ಸಂಘಟನೆಗೆ ಸೇರಿಸಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಿಸುವ ಆಲೋಚನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಸಮಾಜದಲ್ಲಿನ ಲೋಪ – ದೋಷಗಳನ್ನು ತಿದ್ದಬಹುದು. ಶೀಘ್ರದಲ್ಲಿಯೇ ನಾವು ಕಾಲೇಜುಗಳಿಗೆ ಭೇಟಿ ನೀಡಿ ಸದಸ್ಯತ್ವ ಅಭಿಯಾನವನ್ನು ಸಹ ಪ್ರಾರಂಭಿಸುತ್ತೇವೆ. ದೇಶ ಪ್ರೇಮಿ ಕಾರ್ಯಗಳಲ್ಲಿ ಭಾಗವಹಿಸಲು ಇಚ್ಛಿಸುವ ಯುವಕರು ನಮ್ಮ ಸಂಘಟನೆಯ ಕಛೇರಿಗೆ ಸಂಪರ್ಕಿಸಬಹುದು ಎಂದು ಹೇಳಿದರು.ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಸಿದ್ದು ಅಂಬಿಗೇರ ಅವರನ್ನು ಉಪಾಧ್ಯಕ್ಷರನ್ನಾಗಿ, ಓಂ ಜಾಧವ ಅವರನ್ನು ಕಾರ್ಯದರ್ಶಿಯಾಗಿ, ಪರಶುರಾಮ ಸರಾಫ ಹಾಗೂ ವೆಂಕಟೇಶ ಸರಾಫ ಅವರನ್ನು ಸಹ ಕಾರ್ಯದರ್ಶಿಗಳನ್ನಾಗಿ, ಪ್ರದೀಪ ಚಾಂದೇವಾಡಿ