ವಿಜಯಪುರ : ನಗರದ ಅಕ್ಕಮಹಾದೇವಿ ವಿವಿಯಿಂದ ಯುವತಿ ಕಾಣೆಯಾಗಿದ್ದಾಳೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜಿಗಜಿಣಗಿ ಗ್ರಾಮದ ಐಶ್ವರ್ಯ ನಾಮದಾರ (21) ಕಾಣೆಯಾದ ಯುವತಿ. ಅಕ್ಕನ ವಿವಿಯಲ್ಲಿ ಓದುತ್ತಿದ್ದ ಈ ಯುವತಿ, ಮೇ 18 ರಂದು ಊರಿಗೆ ಬರುವುದಾಗಿ ತಿಳಿಸಿದ್ದಳು. ಆದರೆ ಇತ್ತ ಊರಿಗೆ ಬಾರದೇ ಕಾಣೆಯಾಗಿದ್ದಾಳೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















