ಇಂಡಿ: ಇಂಡಿ ರೈಲು ನಿಲ್ದಾಣದಲ್ಲಿ ಸೋಮವಾರ ತಡ ರಾತ್ರಿ ವಿಜಯಪುರದಿಂದ ರಾತ್ರಿ 8:45 ಕ್ಕೆ ಇಂಡಿ ರೈಲು ನಿಲ್ದಾಣಕ್ಕೆ ಮಹಿಳೆ ಭೀಮಾಬಾಯಿ ಈರಪ್ಪ ಧಿವಂತಗಿ ಬಾಗೇವಾಡಿ ಇವರು ಇಂಡಿ ರೈಲು ನಿಲ್ದಾಣಕ್ಕೆ ತನ್ನ ಕುಟುಂಬ ಸಮೇತವಾಗಿ ಬಂದಿಳಿದ್ದಿದ್ದರು. ಅಪರಿಚಿತ 3 ಜನ ಕಳ್ಳರು ಅವರ ಕೊರಳಲ್ಲಿದ್ದ ಅಂದಾಜು ಒಂದೂವರೆ ತೊಲೆ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕ್ಕೊಂಡು ಹೋಗುತ್ತಿದ್ದರು. ಸ್ಥಳೀಯರ ಸಹಕಾರದೊಂದಿಗೆ ಇಂಡಿ ರೈಲ್ವೆ ಪೊಲೀಸ್ ಪೇದೆಗಳಾದ ಎಮ್ ಎಸ್ ತಳವಾರ ಹಾಗೂ ಶಿವಾನಂದ ರತ್ನಪ್ಪ ಸೇರಿ ಇಂಗಳಗಿ ಗ್ರಾಮದ ಸುದೀಪ ಸಿದ್ದಪ್ಪ ಕಾಂಬಳೆ ಎಂಬ ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಇನ್ನು ಇನ್ನಿಬ್ಬರ ಕಳ್ಳರ ಶೋದ್ದಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸ್ ಸಿಬ್ಬಂದಿ ಮಹಿಳೆಗೆ ಆಭರಣ ಮರಳಿ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.