ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ “ಯು.ಪಿ.ಎಸ್.ಸಿ. ಕೆ.ಪಿ.ಎಸ್.ಸಿ. ತರಬೇತಿ ಕೇಂದ್ರದ ಉದ್ಘಾಟನೆ”.
ಕುರುಬರ ಎಸ್.ಟಿ. ಮೀಸಲಾತಿಯ ಮುಂದಿನ “ಹಕ್ಕೋತ್ತಾಯದ ನಡೆಯ ಚಿಂತನ-ಮಂಥನ ಸಭೆ”.
ಲಿಂಗಸೂಗೂರು: ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯವನ್ನು ಬಲಪಡಿಸಲು ಶ್ರೀ ಕಾಗಿನೆಲೆ ಮಹಾ ಸಂಸ್ಥಾನ
ಕನಕ ಗುರುಪೀಠಗಳು ನಿರಂತರವಾಗಿ ಶ್ರಮಿಸುತ್ತಿದ್ದು, “ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮಿಗಳು ಕಾಗಿನೆಲೆ, ಹಿರೇಕೆರೂರು, ಹರಿಹರ, ಶಿಕಾರಿಪುರ, ಮೈಲಾರಗಳಲ್ಲಿ ಉತ್ತಮವಾದ ವಸತಿಯುತ ಶಾಲೆಗಳನ್ನು ಆರಂಭಿಸಿದ್ದಾರೆ. ಇದರ ಸದುಪಯೋಗವನ್ನು ಸಮಾಜದ ಬಂಧುಗಳು ಪಢದುಕೊಳ್ಳಬೇಕು ಎಂದು ಹಾಲುಮತ ಸಮುದಾಯದ ಹಿರಿಯ ಮುಖಂಡರಾದ ಸಂಗಣ್ಣ ಬಯ್ಯಾಪುರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಂದುವರೆದು ಸಮುದಾಯದ ಮಹಾತ್ಕಾಂಕ್ಷೆಯ “ಐಎಎಸ್, ಕೆ.ಎಎಸ್” ತರಬೇತಿ ಕೇಂದ್ರದ ಸ್ಥಾಪನೆಯ ಉದ್ದೇಶ ಸಾಕಾರಗೊಂಡಿದ್ದು, ದಿನಾಂಕ ೦೩-೦೭-೨೦೨೨ ರಂದು ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕು, ಶಿವಮೊಗ್ಗ ರಸ್ತೆ, ಬೆಳ್ಳೂಡಿಯ ಕನಕ ಗುರುಪೀಠದಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಸಂಸ್ಥೆಯನ್ನು ಯು.ಪಿ.ಎಸ್.ಸಿ.ಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಿರುವ “ಬೆಂಗಳೂರಿನ ಇನ್‌ಸೈಟ್ ಐಎಎಸ್”ನ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.
ಅದೇ ದಿನ “ಕುರುಬ ಸಮುದಾಯಕ್ಕೆ ಎಸ್. ಟಿ. ಮೀಸಲಾತಿ”ಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಮನವಿ, ಒತ್ತಾಯಗಳನ್ನು ಮಾಡಲಾಗುತ್ತಿದ್ದು, ಮನವಿಗೆ ಸ್ಪಂದಿಸಿದ್ದ ಸರ್ಕಾರ “ಕುಲಶಾಸ್ತ್ರಿಯ ಅಧ್ಯಯನ ನಡೆಸಲಾಗುತ್ತಿದೆ. ಅಧ್ಯಯನವು ಪೂರ್ಣಗೊಳ್ಳುವ ಹಂತ ತಲುಪಿದ್ದು, “ರಾಜ್ಯ ಸರ್ಕಾರವು ವರದಿಯನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಹಕ್ಕೊತ್ತಾಯದ ನಡೆಯ ಚಿಂತನ ಮಂಥನ ಸಭೆಯಲ್ಲಿ ಜಗದ್ಗುರುಗಳ ಸಾನಿಧ್ಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪ್ರತಿನಿಧಿಗಳು, ಸಮಾಜದ ಸಮ್ಮುಖದಲ್ಲಿ ನಿರ್ಣಯ ಮಂಡಿಸಿ, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.
ಎಸ್.ಟಿ. ಮೀಸಲಾತಿಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಕಾರ್ಯಕ್ರಮ ಕ್ಕೆ ರಾಜ್ಯಾದಿಂದ ಲಕ್ಷಾಂತರ ಜನರು ಸೇರಲಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕು ಕುರುಬ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಬನ್ನಿಗೋಳ್ಕರ್, ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಶರಣಯ್ಯ ಒಡೆಯರ್ ಉಪಸ್ಥಿತಿ ಇದ್ದರು.