ಜ-18 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನಾ ಧರಣಿ..!
ರಾಮನಗರ : ಸಂವಿಧಾನ ಶಿಲ್ಪಿ, ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಅವಮಾನ ಮಾಡಿರುವ ಕಾನೂನು ವಿರೋಧಿಗಳನ್ನು, ಕೂಡಲೇ ಬಂಧಿಸಿ ಮತ್ತು ರಾಜ್ಯದಿಂದ ಗಡೀಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಜ-18 ಬೆಳಿಗ್ಗೆ 11 ಘಂಟೆಯಿಂದ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಚಾಲಕ ಡಿ. ನಾರಾಯಣ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರ ಜನವರಿ 17 ರಂದು ರಾಜ್ಯದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ, ಸಾರ್ವಜನಿಕವಾಗಿ, ಕೆಲವು ಕಿಡಿಗೇಡಿಗಳು, ಕೊಳಕು ಟೊಮೊಟೊ ಸಾಸ್ ಅನ್ನು ಹಾಕಿ, ಅವಮಾನ ಮಾಡಿ, ಅಟ್ಟಹಾಸ ಮೆರೆದಿರುತ್ತಾರೆ. ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಬಲವಾಗಿ ಖಂಡಿಸುತ್ತದೆ.
ಆದ್ದರಿಂದ, ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಆಡಳಿತ ನಡೆಸುತ್ತಿರುವ ಸರ್ಕಾರ, ಸಚಿವ ಸಂಪುಟ ತಮ್ಮ ಎಲ್ಲ ಎಲ್ಲಾ ಕೆಲಸಗಳನ್ನು ಬದಿಗೊತ್ತಿ, ಸಂವಿಧಾನ ಕೊಡುಗೆ ನೀಡಿದ ಬಾಬಾ ಸಾಹೇಬರ ಪ್ರತಿಮೆಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿ, ಆಗಿರುವ ಅನಾಹುತದ ಜವಾಬ್ದಾರಿ ಹೊತ್ತು, ಕ್ಷಮೆಯಾಚಿಸಿ, ಆರೋಪಿಗಳನ್ನು ರಾಜ್ಯದಿಂದಲೇ ಗಡೀಪಾರು ಮಾಡಬೇಕೆಂದು ಒತ್ತಾಯಿಸುತ್ತೇವೆ. ಇಲ್ಲದ್ದಿದ್ದಲ್ಲಿ, ಸರ್ಕಾರದ ನಡೆಯನ್ನು ವಿರೋಧಿಸಿ, ರಾಜ್ಯದಾದ್ಯಂತ, ಜೈಲ್ ಬರೋ ಚಳುವಳಿಯನ್ನು ಹಮ್ಮಿಕೊಳ್ಳುವುದಾಗಿ, ತಿಳಿಸಲಿಚ್ಚಿಸುತ್ತೆವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿಕೆ. ಶಿವಶಂಕರ್ ಜಿಲ್ಲಾ ಸಂಚಾಲಕರು, ಭೈರಲಿಂಗಯ್ಯ, ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಘ, ರಾಮನಗರ ಜಿಲ್ಲೆ, ಶಿವಣ್ಣ, ರಾಮನಗರ ಜಿಲ್ಲಾ ಸಂಘಟನಾ ಸಂಚಾಲಕರು, ವಿಜಯಮ್ಮ, ಜಿಲ್ಲಾ ಮಹಿಳಾ ಸಂಚಾಲಕರು ,ಅಪ್ಪಾಜಿ, ಜಿಲ್ಲಾ ಸಂಘಟನಾ ಸಂಚಾಲಕರು, ಶ್ರೀನಿವಾಸ್, ಜಿಲ್ಲಾ ಸಂಘಟನಾ ಸಂಚಾಲಕರು ಇನ್ನೂ ಅನೇಕರು ಉಪಸ್ಥಿತರಿದ್ದರು.