ಅಫಜಲಪೂರ: ಸಮಾಜದಲ್ಲಿ ಹಲವಾರು ಜನ ಶ್ರೀಮಂತರು ಇದ್ದಾರೆ. ಇಂತಹ ಕಲ್ಯಾಣ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಹೃದಯ ಶ್ರೀಮಂತಿಕೆ ಇರುವುದಿಲ್ಲ. ಆದರೆ ಆರ್.ಡಿ. ಪಾಟೀಲ ಮತ್ತು ಮಹಾಂತೇಶ ಪಾಟೀಲ ಅವರ ಪರಿವಾರದಲ್ಲಿ ಇದೆ ಎಂದು ಶಾಸಕ ಎಂ.ವೈ ಪಾಟೀಲ ಹೇಳಿದರು. ಪಟ್ಟಣದ ನ್ಯಾಷನಲ್ ಪಂಕ್ಷನಹಾಲ್‌ನಲ್ಲಿ ಯುವ ನಾಯಕ ಆರ್.ಡಿ. ಪಾಟೀಲ್ ಹಾಗೂ ಮಹಾಂತೇಶ ಪಾಟೀಲ ಅವರು ಹಮ್ಮಿಕೊಂಡ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಆರ್.ಡಿ. ಪಾಟೀಲ್ ಮತ್ತು ಮಹಾಂತೇಶ ಪಾಟೀಲ ಅವರು ಅನುಪಸ್ಥಿತಿಯಲ್ಲಿ, ಅವರ ತಾಯಿ ಮತ್ತು ಧರ್ಮಪತ್ನಿ ಹಾಗೂ ಸಹೋದರ ಶಿವಕುಮಾರ ಪಾಟೀಲ ಸಮ್ಮುಖದಲ್ಲಿ ವಿವಾಹ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದನ್ನು ಶ್ಲಾಘಿಸಿದರು.
ಕಷ್ಟದ ಸಮಯದಲ್ಲಿಯೂ ಕೂಡ ಅವರ ಪರಿವಾರ ಧೃತಿಗೆಡದೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧು ವರರಿಗೆ ಶುಭಹಾರೈಸಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಆರ್.ಡಿ ಪಾಟೀಲ ಅವರ ಸಹೋದರ ಶಿವಕುಮಾರ ಪಾಟೀಲ ಮಾತನಾಡಿ ನಮ್ಮ ಸಹೋದರರು ಸಾಮಾಜಿಕ ಸೇವೆ ಮಾಡುವ ತುಡಿತ ಅವರಲ್ಲಿ ಕಂಡಿದ್ದೇನೆ. ಕಾರಣಾಂತರಗಳಿಂದ ಇಂದು ಅವರ ಅನುಪಸ್ಥಿತಿಯಲ್ಲಿ ಕೂಡ ಅಭಿಮಾನಿಗಳು ಯಾವುದಕ್ಕೂ ಧೃತಿಗೆಡದೆ ಮತ್ತು ಹೆದರದೆ ನಮ್ಮೊಂದಿಗೆ ಇಂದು ಇಷ್ಟೊಂದು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದು ಸಂತಸ ತಂದಿದೆ ಎಂದು ಹೇಳಿದಾಗ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಕೆಲಹೊತ್ತು ಭಾವುಕರಾದರು. ನಮ್ಮ ಪರಿವಾರಕ್ಕೆ ಎಷ್ಟೆ ಕಷ್ಟ ಬಂದರೂ ನಿಮ್ಮ ಸೇವೆಗೆ ಪಾಟೀಲ ಪರಿವಾರ ಸದಾಸಿದ್ಧ ಎಂದು ಹೇಳಿದ ಅವರು ಈ ಸಮಾರಂಭಕ್ಕೆ ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಎಲ್ಲಾ ಮಹಾಜನತೆಯ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಎಂದು ಮನವಿ ಮಾಡಿದ ಅವರು ಆಗಮಿಸಿದ ಪೂಜ್ಯರಿಗೆ ಮತ್ತು ತಾಲೂಕಿನ ಗಣ್ಯ ಮಾನ್ಯರಿಗೆ ಅಭಿನಂದಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮುಖಂಡರಾದ ಮಕ್ಬೂಲ್ ಪಟೇಲ ಮತ್ತು ಲಚ್ಚಪ್ಪ ಜಮಾದಾರ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯರಾದ ಶ್ರೀ ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ, ಅಫಜಲಪೂರ ಪಟ್ಟಣದ ಮಳೇಂದ್ರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಚಿನ್ಮಯಗಿರಿ ಮಠದ ಪೂಜ್ಯ ಶ್ರೀ ಸಿದ್ದರಾಮ ಶಿವಾಚಾರ್ಯರು, ಬಡದಾಳ ತೇರಿನ ಮಠದ ಪೂಜ್ಯ ಶ್ರೀ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಹಿಂಚಗೇರಿ ಗ್ರಾಮದ ಶಿವಯೋಗೇಶ್ವರ ಬೃಹನ್ಮಠದ ಪೂಜ್ಯಶ್ರೀ ಶಂಭುಲಿಂಗ ಶಿವಾಚಾರ್ಯರು, ಗೊಳಸಾರ ಮಠದ ಶ್ರೀಗಳು, ಅತನೂರ ಮಠದ ಅಭಿನವ ಗುರುಬಸವ ಶಿವಾಚಾರ್ಯರು, ಮಾಶಾಳದ ಕೇದಾರ ಶ್ರೀಗಳು ಸೇರಿದಂತೆ ತಾಲೂಕಿನ ಹಾಗೂ ನೆರೆ ತಾಲೂಕು, ಜಿಲ್ಲೆಯ ವಿವಿಧ ಭಾಗಗಳಿಂದ ಮಠಾಧೀಶರು ಸಮಾರಂಭಕ್ಕೆ ಆಗಮಿಸಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾಮೂಹಿಕ ವಿವಾಹ ಸಮಾರಂಭದಲ್ಲಿ ೫೭ ನವ ವಧುವರರು ನವ ಜೀವನಕ್ಕೆ ಕಾಲಿಟ್ಟರು. ಸಮಾರಂಭದಲ್ಲಿ ಮುಖಂಡರಾದ ಮಕ್ಬೂಲ್ ಪಟೇಲ್, ಸಿದ್ದಯ್ಯ ಹೀರೆಮಠ ಕರಜಗಿ, ಚಂದು ಕರಜಗಿ, ಚಿದಾನಂದ ಮಠ, ಲಚ್ಚಪ್ಪ ಜಮಾದಾರ, ಪಪ್ಪು ಪಟೇಲ, ಮತೀನ ಪಟೇಲ, ತುಕಾರಾಮ ಗೌಡ ಪಾಟೀಲ, ಫಿರೋಜ ಜಾಗೀರದಾರ, ಶರಣಪ್ಪ ಕಣಮೇಶ್ವರ, ಬಸವರಾಜ ತಾವರಖೇಡ, ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಭೀಮಣ್ಣ ಸಾಲಿ, ಚಂದಾ ನಿಂಬಾಳ, ರವೀಂದ್ರ ಕಣ್ಣಿ, ಪಾಶಾ ಮಣ್ಣೂರ, ಚಂದ್ರಾಮ ಬೆಳಗೊಂಡಿ, ನಾಗಪ್ಪ ಆರೇಕರ, ನಾಗರಾಜ ಬುಜರಿ, ಸಂತೋಷ ಹೆಗ್ಗಿ, ಸಿದ್ದಾರಾಮ ಜವಳಿ, ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರ, ಜೆ.ಎಂ ಕೊರಬು, ಶಂಕರ ಮ್ಯಾಕೇರಿ, ರಮೇಶ ಮಾಸ್ತರ, ಮಹಾರಾಯ ಅಗಸಿ, ವಿದ್ಯಾಧರ ಮಂಗಳೂರೆ, ಬಸವರಾಜ ಕಿಣಗಿ, ಗುಂಡು ಅಂಕಲಗಿ, ಮಲ್ಲಿಕಾರ್ಜುನ ಕಿರಸಾವಳಗಿ, ದೇವಪ್ಪ ಕಿರಸಾವಳಗಿ, ಮಹಾರಾಯ ಜಮಾದಾರ, ಶಿವರಾಯ ಕುದರಿ, ಈಶ್ವರ ಅಂಕಲಗಿ, ಸಿದ್ದಪ್ಪ ಸಿನ್ನೂರ, ಮಹಾಂತೇಶ ಜಮಾದಾರ, ಮಹಾಂತೇಶ ಬಡಿಗೇರ, ಸಂಗನಗೌಡ ಪಾಟೀಲ, ಅಶೋಕ ಪಾಟೀಲ ಸೊನ್ನ, ಬಿಸಿ ಪಾಟೀಲ, ವಿಠ್ಠಲ ಉಮ್ಮನಗೋಳ ಸೇರಿದಂತೆ ಸೊನ್ನ ಗ್ರಾಮದ ಸಮಸ್ತ ಗ್ರಾಮಸ್ಥರು ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ ಗಣ್ಯ ಮಾನ್ಯರು, ಅಫಜಲಪೂರ ಪಟ್ಟಣದ ನಾಗರಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಖ್ಯಾತ ಸಂಗೀತ ಕಲಾವಿದ ಶಿವರುದ್ರಯ್ಯ ಗೌಡಗಾಂವ ಅವರ ಕಲಾಬಳಗ ಸಂಗೀತ ಸೇವೆ ಸಲ್ಲಿಸಿದರು. ಮುಖಂಡ ಲಚ್ಚಪ್ಪ ಜಮಾದಾರ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ದಿವ್ಯಾ ಆಲೂರ, ಎ.ಬಿ. ಪಟೇಲ ಸೊನ್ನ ನೆರವೇರಿಸಿದರು. ಕಾರ್ಯಕ್ರಮಕ್ಕೆ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಪೋಲಿಸ್ ಬಂದೋಬಸ್ತ್ ಒದಗಿಸಿದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: