ಫೆ.26-27 ಬೃಹತ್ ಉದ್ಯೋಗ ಮೇಳ
ವಿಜಯಪುರ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಫೆ.26 ಹಾಗೂ ಫೆ.27ರವರಗೆ ಎರಡು ದಿನಗಳ ಕಾಲ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಲಾಗಿದೆ.
ಉದ್ಯೋಗ ಮೇಳಕ್ಕೆ ಮತ್ತು 500ಕ್ಕೂ ಹೆಚ್ಚು ವಿವಿಧ ಬೃಹತ್, ಮಧ್ಯಮ, ಸಣ್ಣ ಮತ್ತು ಇತರೆ ವಲಯದ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸಲಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ನಸಿರ್ಂಗ್, ಸ್ನಾತಕ್ಕೋತ್ತರ ಪದವಿ, ಇಂಜನೀಯರಿಂಗ್ ಮತ್ತು ವಿವಿಧ ವಿದ್ಯಾರ್ಹತೆಯುಳ್ಳ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಿ ತಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು https://skillconnect.kaushalkar.com/ ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ಭಾಗವಹಿಸಿಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿ ವೃದ್ಧಿ ಅಧಿಕಾರಿಗಳ ಕಚೇರಿ ದೂ: 08352-297019, ಸಹಾಯವಾಣಿ ಸಂಖ್ಯೆ:18005999918 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.