ಇಂಡಿಯಲ್ಲಿ ಕುಡಿಯುವ ನೀರಿಗಾಗಿ ಬೃಹತ್ ಪಾದಯಾತ್ರೆ
ಇಂಡಿ : ಜನ- ಜಾನುವಾರಗಳಿಗೆ ಕುಡಿಯುವ ನೀರಿಗಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ವಿವಿಧ ಗ್ರಾಮದ ರೈತರು ಬೃಹತ್ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿರುವ ಘಟನೆ ಇಂಡಿಯಲ್ಲಿ ನಡೆದಿದೆ.
ಮಂಗಳವಾರ ಪಟ್ಟಣದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಅಂಜುಟಗಿ ಗ್ರಾಮದಿಂದ ನೂರಾರು ಸಂಖ್ಯೆಯಲ್ಲಿ ರೈತರು ಜಮಾಗೊಂಡು ತಾಲ್ಲೂಕು ಆಡಳಿತ ಸೌಧದವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ತಹಶಿಲ್ದಾರ ಬಿ ಎಸ್ ಕಡಕಭಾವಿ ಅವರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಣಮಂತರಾಯಗೌಡ ಪಾಟೀಲ, ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಮರೆಪ್ಪ ಗಿರಣಿವಡ್ಡರ್, ಸಿದ್ದರಾಮ ನಿಚ್ಚಲ ಸೇರಿದಂತೆ ಅನೇಕ ರೈತರು ಮುಖಂಡರು ಮಾತನಾಡಿದವರು, ಲಾಠಿ ಚಾರ್ಜ ಮಾಡಲಿ,
ಪೋಲಿಸ್ ಪ್ರಕರಣ ದಾಖಲಿಸಲಿ, ಒಂದು ವೇಳೆ ಬಂಧನ ಮಾಡಿದರೆ ಸೆರೆವಾಸ ಅನುಭವಿಸಲು ಸಿದ್ದರಿದ್ದವೆ. ಆದರೆ ಯಾವುದೇ ಈ ಕಾರಣಕ್ಕೂ ನೀರು ಬಿಡುವರೆಗೂ ಈ ಸ್ಥಳ ಬಿಟ್ಟು ಕದಲುವ ಮಾತೆ ಇಲ್ಲ ಎಂದು ಹೇಳಿದರು.
ಅಂಜುಟಗಿ, ಬುದಿಹಾಳ, ಭತಗುಣಕಿ, ಅಹಿರಸಂಗ, ಝಳಕಿ, ಇಂಡಿ ಸ್ಪೆಶನ ಸೇರಿದಂತೆ ಅನೇಕ ಗ್ರಾಮಗಳು ಕುಡಿಯುವ ನೀರಿನ ಅತ್ಯಂತ ಗಂಭೀರ ಕೆಟ್ಟ ಪರಿಸ್ಥಿತಿ ಅನುಭವಿಸುತ್ತಿದ್ದೆವೆ. ಈ ನಮ್ಮ ಭಾಗದಲ್ಲಿ ಯಾವುದೇ ಕೆರೆ-ಕಟ್ಟೆಗಳು ಹಾಗೂ ಭಾವಿಗಳು ಅಥವಾ ಇತರೆ ಯಾವುದೇ ಮೂಲದಲ್ಲಿ ನೀರು ಲಭ್ಯವಾಗುವುದಿಲ್ಲ. ಇದ್ದ ಕೊಳೆವೆ ಭಾವಿಗಳು ಬತ್ತಿ ಹೋಗಿವೆ. ಆದರೆ ಇದೆ ಭಾಗದಲ್ಲಿ ಗುತ್ತಿಬಸವಣ್ಣ ಕಾಲುವೆ ಸುಮಾರು 9 ವರ್ಷಗಳ ಹಿಂದೆ ನಿರ್ಮಾಣಗೊಂಡರೂ ಇಲ್ಲಿಯವರೆಗೆ ಒಂದು ಹನಿ ನೀರು ಸಹ ಹರಿದಿರುವುದಿಲ್ಲ. ಅದಲ್ಲದೇ ರೈತರ ಭೂಮಿ ಅಗೆದು ಕಾಲುವೆ ಮಾಡಿರುವುದು ಯಾವ ಕಾರಣಕ್ಕೆ, ಹಣ ನುಂಗವುದಕ್ಕಾಗಿಯೇ ಎಂದು ಪ್ರಶ್ನೆ ಮಾಡಿದರು..? ಈ ಸದ್ಯ, ಈ ಗ್ರಾಮಗಳು ಅತ್ಯಂತ ಭೀಕರ ಬರಗಾಲಕ್ಕೆ ಒಳಪಟ್ಟಿವೆ. ರೈತರ ಬದಕು ತುಂಬಾ ಕಷ್ಟಕರ ದುಸ್ತರವಾಗಿದೆ. ಈ ಕೂಡಲೇ ಸಂಭಂದಿಸಿದ ಕೃಷ್ಣ ಭಾಗ್ಯ ಜಿಲ ನಿಗಮ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸುಮಾರು ಬಾರಿ ಮನವಿ ಮಾಡಿದರು ಸಹ ಯಾವುದೆ ಪ್ರಯೋಜನ ಆಗಿರುವುದಿಲ್ಲ. ತಾಲ್ಲೂಕಿನ ಅಂಜುಟಗಿ ಗ್ರಾಮದ ಅಂಭಾ ಭವಾನಿ ದೇವಸ್ಥಾನದಿಂದ ಇಂಡಿ ಪಟ್ಟಣದ ಮಿನಿ ವಿಧಾನಸೌಧದ ವರೆಗೆ ಪಾದಯಾತ್ರೆ ಮೂಲಕ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ಕೂಡಲೇ ಗ್ರಾಮಗಳ ವ್ಯಾಪ್ತಿಯ ಪ್ರದೇಶದ ಕಾಲುವೆಗೆ ಜರೂರ ನೀರು ಹರಿಸಲು ಆಗ್ರಹಿಸಿದರು.
ಮೊದಲಾದ ಹಳ್ಳಿಗಳ ಜನರು ಪಾದಯಾತ್ರೆ ಮೂಲಕ ತಾವು ಅನುಭವಿಸುತ್ತಿರುವ ಕುಡಿಯುವ ನೀರಿನ ಬವಣೆಯನ್ನು ಸರಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದರು.
ತಹಶಿಲ್ದಾರ ಬಿಎಸ್ ಕಡಕಭಾವಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಮಾತನಾಡಿದ ಅವರು, ನಿಮ್ಮ ಮನವಿ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸುವ ಬಗ್ಗೆ ತಿಳಿಸಿದರು. ಇದಕ್ಕೆ ಒಪ್ಪದ ರೈತರು ನಮಗೆ ನೀರು ಬಿಡುವ ಅಧಿಕೃತವಾಗಿ ಹೇಳಬೇಕೆಂದು ಪಟ್ಟು ಹಿಡಿದರು. ಆದರೆ ಮನೋಜಕುಮಾರ ಅವರು ಮಾತನಾಡಿ, ನಿಮ್ಮ ಜೊತೆಯಲ್ಲಿ ನಾನು ಕುಳಿತುಕೊಳ್ಳುತ್ತೆನೆ. ನೀವು ಎಲ್ಲಿಯವರೆಗೆ ಕುಡಿತ್ತಿರೋ..! ಅಲ್ಲಿಯವರೆಗೆ ನಾನು ಕೂಡುತ್ತೆನೆ. ಆದರೆ ವಾಸ್ತವ ಸ್ಥಿತಿ ಬಗ್ಗೆ ಅರ್ಥ ಮಾಡಿಕೊಂಡು ಈ ಸದ್ಯ ಕಾಲುವೆ ಇರುವ ಪರಿಸ್ಥಿತಿ ಗಮನಿಸ ಅದಕ್ಕೆ ಬೇಕಾದ ಪರಿಹಾರ ಮಾರ್ಗಕಂಡುಕೊಂಡು ಕಟ್ಟೆ ಕಡೆಯ ಭಾಗಕ್ಕೂ ಸರಕಾರದ ಉದ್ದೇಶದಂತೆ ನೀರು ಹರಿಸೋಣ ಎಂದು ಹೇಳಿದ್ದ ಪರಿಣಾಮ ರೈತರು ಪ್ರತಿಭಟನೆ ಯಿಂದ ಹಿಂದೆ ಸರಿದರು.
ಈ ಸಂದರ್ಭದಲ್ಲಿ ಶರಣು ಡಂಗಿ, ಬಸು ಕವಡೆ, ಶಂಕರ್ ಅಸಂಗಿ, ರಮೇಶ್ ಬರಗೊಂಡ, ಸಿದ್ದಾರಯ ಗಾಣಗೇರ , ಅಪ್ಪುಗೌಡ ಪಾಟೀಲ, ಸಿದ್ದರಾಮ ನಿಚ್ಚಾಲೆ, ರಮೇಶ್ ಗಿರಣಿ ವಡ್ಡರ್, ಮಹಾದೇವ ಬಿರಾದಾರ, ನಿಯಾಜ್ ಅಗರಖೇಡ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.