ಅಫಜಲಪುರ: ಬೆಳಕು ಸಾಂಸ್ಕೃತಿಕ ಕಲಾ ಸಂಸ್ಥೆ ಮಾದಾಬಾಳ ತಾಂಡಾ, ಅಫಜಲಪುರ ತಾಲೂಕು, ಕಲಬುರಗಿ ಜಿಲ್ಲೆ ವತಿಯಿಂದ ಮಾದಾಬಾಳ ತಾಂಡಾದ ಶ್ರೀ ಜಗದಂಬಾ ದೇವಿ ದೇವಸ್ಥಾನ ಆವರಣದಲ್ಲಿ, “ಸಾಂಸ್ಕೃತಿಕ ಉತ್ಸವ” ಜರುಗಿತು ಎಂದು ಬೆಳಕು ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ಶ್ರೀ ಅಪ್ಪು ಬಿ. ರಾಠೋಡ ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಿಂದ ಸುಗಮ ಸಂಗೀತ, ವಚನ ಗಾಯನ, ತತ್ವಪದ, ಭಾವ ಗೀತೆ, ಭಕ್ತಿ ಗೀತೆ, ಜಾನಪದ ಗೀತೆ, ಶಿವಕಥಾ ಕೀರ್ತನೆ, ದಾಸವಾಣಿ, ಮುಂತಾದವು ಜರುಗಿದವು ಎಂದು ಮಾಹಿತಿ ನೀಡಿದರು.
ಮುಖಂಡ ಶ್ರೀಧರ್ ಡಿ. ರಾಠೋಡ, ಶ್ರೀ ಕಾಂತು ವಿ. ಪವಾರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಗ್ರಾಮದ ಹಿರಿಯ ಮುಖಂಡರಾದ ಲೋಕು ಡಿ. ರಾಠೋಡ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆಯ ಸದಸ್ಯರಾದ ಶ್ರೀ ಶ್ರೀಧರ್ ಡಿ. ರಾಠೋಡ ವಹಿಸಿದರು.