ಇಂಡಿ : ಪಟ್ಟಣದ ಮುಸ್ಲಿಂ ಸಮಾಜದ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98 ಅಂಕಗಳನ್ನು ಪಡೆದ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶಿರಿಯಾ ಸಾಯಿಬಾಬಾ ಅವಟಿ, ಉರ್ದು ಮಾಧ್ಯಮದಲ್ಲಿ 99 ಅಂಕಗಳನ್ನು ಪಡೆದ ಹೀನಾ ಬುರಹಾನ ಮುಲ್ಲಾ ಇವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಧರ್ಮ ಗುರುಗಳು ಇಸ್ಮಾಯಿಲ್ ಇನಾಮದಾರ, ಹಾಫಿಜ ಫೀರುಜ ಬಾಗವಾನ, ಪಟ್ಟಣದ ಯುವ ನಾಯಕ ಪ್ರಭುಗೌಡ ಪಾಟೀಲ, ಇಮ್ರಾನ ಮುಜಾವರ, ಅಜಹರ ನಾಗುರ, ಹಾಗೂ ಸಮಾಜ ಸೇವಕ ಹಸನ ಮುಜಾವರ ಸೇರಿದಂತೆ ಅನೇಕರು ಇದ್ದರು.