ವಿಜಯಪುರ : ಸಿಡಿಲಿ ಬಡಿದು ಮನೆಯಲ್ಲಿದ್ದ ವಸ್ತುಗಳು ಹಾನಿ ಹಾಗೂ ಓರ್ವ ಬಾಲಕನಿಗೆ ಗಾಯವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಗರಸಂಗಿ ಸರ್ವೆ ನಂಬರನಲ್ಲಿ ನಡೆದಿದೆ.
ಗುರಪ್ಪ ಕಂಕನವಾಡಿ ಜಮೀನಿನಲ್ಲಿ ವಾಸವಾಗಿದ್ದ ಎರಡು ಕುಟುಂಬಗಳ ಮನೆಯ ಮೇಲೆ ಸಿಡಿಲ ಬಡಿದು ಮನೆಗೆ ಹಾಕಲಾಗಿದ್ದ ವಿದ್ಯುತ್ ಕೇಬಲ್ ಹಾಗೂ ಮೀಟರಗಳು ಸುಟ್ಟು ಕರಕಲಾಗಿವೆ. ಇನ್ನು 9 ವರ್ಷದ ವಿನಾಯಕನಿಗೆ ಗಾಯಗಳಾಗಿವೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.