ಇಂಡಿ:ರಾಜ್ಯ ಹಾಗೂ ಉಳಿದ ಜಿಲ್ಲೆಗಳಲ್ಲಿ ಕಬ್ಬಿಗೆ ಉತ್ತಮ ದರ ನೀಡುತ್ತಿದ್ದು, ವಿಜಯಪುರ ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಡಿಮೆ ದರ ನೀಡಿ ಅನ್ಯಾಯ ಮಾಡುತ್ತಿವೆ ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಆರೋಪಿಸಿದರು.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮಾತನಾಡಿದ ಅವರು, ಬೇರೆ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಆ ಭಾಗದ ಸಕ್ಕರೆ ಕಾರ್ಖಾನೆಗಳು 2700 ರೂಪಾಯಿ ಪ್ರತೀ ಟನ್‌ಗೆ ಹಣ ನೀಡುತ್ತಿವೆ. ಭೀಮಾ ಭಾಗದಲ್ಲಿಯೂ ಅದೇ ದರ ನೀಡಬೇಕು. ಆದರೆ ಇಲ್ಲಿನ ಕಾರ್ಖಾನೆ ಮಾಲೀಕರು ಕೇವಲ 2300-2350 ರೂಪಾಯಿ ನೀಡುತ್ತಿರುವುದು ಈ ಭಾಗದ ರೈತರ ದುರ್ದೈವವಾಗಿದೆ. ರೈತರಿಗೆ ಉತ್ತಮ ದರ ನೀಡಬೇಕು ಎಂದು ಕಾಸುಗೌಡ ಬಿರಾದರ್ ಆಗ್ರಹಿಸಿದರು.