ಇಂಡಿ : ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತದಾನ ಅತ್ಯಂತ ಅವಶ್ಯವಾಗಿದೆ. ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತದಾನ ಮಾಡುವ ಪದ್ಧತಿಯನ್ನು ಅರಿತು ಭವಿಷ್ಯದ ನಾಯಕರನ್ನು ಆಯ್ಕೆ ಮಾಡುವ ಮೂಲಕ ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು. ಎಂದು ಸಿ.ಆರ್.ಪಿ ಶ್ರೀಧರ್ ಹಿಪ್ಪರಗಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತಾನಾಡಿ ಹೇಳಿದರು.
ಪಟ್ಟಣದ ಗಾಂಧಿ ಬಾಜಾರ ಕೇಂದ್ರಸ್ಥಾನದಲ್ಲಿರುವ ಕೆಜಿಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೨/೨೦೨೩ ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಗೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೇಣಿಕರಾಜ ಹಳ್ಳಿ ಮತ್ತು ಮುಖ್ಯ ಗುರುಗಳು ಯು.ಎಚ್ ಚವ್ಹಾಣ ಚಾಲನೆ ನೀಡಿದರು.
ಸರಕಾರದ ಸಾರ್ವತ್ರಿಕ ಚುನಾವಣೆಯಂತೆ, ಶಾಲೆಯಲ್ಲಿ ಶಾಚುನಾವಣೆಯ ಅಧಿಸೂಚನೆ ಹೊರಡಿಸಿ ಜೊತೆಗೆ ಪಕ್ಷ ನೀಡುವ B ಪಾರ್ಮ ಕೂಡ ವಿಧ್ಯಾರ್ಥಿಗಳಿಗೆ ವಿತರಿಸಿದರು. ಅದರಂತೆ ಚುನಾವಣೆ ವೇಳಾಪಟ್ಟಿ
ಪ್ರಕಟಿಸಿ ನಾಮಪತ್ರ ಸಲ್ಲಿಕೆ, ಹಿಂಪಡೆಯುವಿಕೆ ಸ್ಪರ್ಧಿಸಿರುವ ವಿಧ್ಯಾರ್ಥಿಗಳಿಗೆ ಪ್ರಚಾರಕ್ಕೆ ಕಾಲವಕಾಶ ನೀಡಲಾಗಿತ್ತು. ನಾಮಪತ್ರ ಅಸಿಂಧುಗೊಳ್ಳುವಂತಹ ಚಿತ್ರಣ ಹಿಡಿದು ಎಲ್ಲಾ ಚುನಾವಣೆ ಪ್ರಕ್ರಿಯೆಗಳು ನಡೆದವು.
ಅದರಲ್ಲೂ ಅಧಿಕಾರಿಗಳು ಮತಪೆಟ್ಟಿಗೆಯೊಂದಿಗೆ ತೆರಳುವ ನೈಜ ಸ್ಥಿತಿಯ ಅಣಕು ಪ್ರದರ್ಶನ ಶಿಕ್ಷಕರೆ ಮಾಡಿ ಮಕ್ಕಳಲ್ಲಿ ಕೂತಹಲ ಮೂಡಿಸಿದರು.ಇನ್ನೂ ಪೋಲಿಂಗ ಆಫೀಸರ್ ೧ ಪೊಲಿಂಗ ಆಫೀಸರ್ ೨ ಮತ್ತು ಪ್ರೊಸಡಿಂಗ್ ಆಫಿಸರಾಗಿ ಶಿಕ್ಷಕರೇ ಕರ್ತವ್ಯ ನಿರ್ವಹಿಸಿದರು.
ಮತದಾನ ಮಾಡಲು ಬರುವ ವಿಧ್ಯಾರ್ಥಿಗಳಿಗೆ ಆಧಾರ ಕಾರ್ಡ ಮತ್ತು ಶಾಲೆಯಲ್ಲಿ ಕೊಟ್ಟಿರುವ ಗುರುತಿನ ಚೀಟಿ ಪರಿಶೀಲಿಸಿ ಮತದಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು. ಜೊತೆಗೆ ೧೭ ಎ ಮತಪತ್ರವನ್ನೇ ತಯಾರಿಸಿ ಮಕ್ಕಳಿಗೆ ಮತದಾನ ಮಾಡಲು ಅವಕಾಶ ಮಾಡಿದರು.
ಈ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಿದ ವಿಧ್ಯಾರ್ಥಿನಿ ಪ್ರೀತಿ ಕಾಲೇಬಾಗ ಮಾತಾನಾಡಿ ಭವಿಷ್ಯದಲ್ಲಿ ಮತದಾನ ಮಾಡುವ ಭಯವೇ ಹೋಯಿತು ಎಂದಳು.
ಏಕೆಂದರೆ ನಮ್ಮ ಶಾಲೆಯಲ್ಲಿ ಇಂದು ನಡೆದಿರುವ ಚುನಾವಣೆ ಪ್ರಕ್ರಿಯೆ ಗಮನಿಸಿದೆ. ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತೆ, ಯಾವಲ್ಲಾ ಅಧಿಕಾರಿಗಳು ಹೇಗೆ ಎಲ್ಲಾ ಕರ್ತವ್ಯ ನಿರ್ವಹಿಸುತ್ತಾರೆ ಎಂಬುವದು ಮನದಟ್ಟವಾಗಿದೆ ಎಂದು ಹೇಳಿದಳು. ಭವಿಷ್ಯದಲ್ಲಿ ಮತದಾನ ಮಾಡಲಿಕ್ಕೆ ಆಗಲಿ ಅಥವಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿಕ್ಕೆಯಾಗಲಿ ಯಾವುದೇ ತೊಂದರೆ ಯಾಗದು ಎಂದು ಹೇಳಿದಳು.
ಈ ಸಂದರ್ಭದಲ್ಲಿ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊಂದಿದ ಮುಖ್ಯ ಗುರುಗಳು ಯು.ಎಚ್ ಚವ್ಹಾಣ ಯಾವುದೇ ಅಹಿತಕರ ಮತ್ತು ಕೆಟ್ಟ ವಿಚಾರಗಳಿಗೆ ಅವಕಾಶ ನೀಡದೇ ಮುಕ್ತ ಮತ್ತು ಗೌಪ್ಯ ಮತದಾನ ಮಾಡಲು ವಿಧ್ಯಾರ್ಥಿಗಳಿಗೆ ತಿಳಿಸಿದರು. ತದನಂತರ ಮಾತಾನಾಡಿದ ಅವರು, ಮಕ್ಕಳಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಕ್ರಿಯೆ ನಮ್ಮ ಶಿಕ್ಷಕರು ಅಚ್ಚುಕಟ್ಟಾಗಿ ಅಣಕು ಸಂಸತ್ತು ಚುನಾವಣೆ ಮಾಡುವ ಮೂಲಕ ಮನದಟ್ಟನೆ ಮಾಡಿದರು. ಅದರಲ್ಲೂ ನಮ್ಮ ಶಾಲೆಯ ಶಿಕ್ಷಕರು ಅತೀ ಉತ್ಸುಕರಾಗಿ ಪಠ್ಯ ಮತ್ತು ಪಠ್ಯತೇರ ಚಟುವಟಿಕೆಗಳಿಗೆ ಅತೀ ಹೆಚ್ಚು ಮಹತ್ವ ನೀಡಿ ಮಕ್ಕಳಲ್ಲಿ ಸರ್ವೊತೋಮುಖ ಅಭೀವೃದ್ದಿ ವಿಚಾರಗಳಿಗೆ ಧಾರೆಯರೆಯುತ್ತಿದ್ದಾರೆ ಇದು ತುಂಬಾ ಸಂತೋಷದ ವಿಷಯ ಜೊತೆಗೆ ಎಸ್ ಡಿ ಎಮ್ ಸಿ ಯವರು ತುಂಬಾ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಎ ಎಸ್ ಲಾಳಸೇರಿ, ದೈಹಿಕ ಶಿಕ್ಷಣ ಪರಿವಿಕ್ಷಕರು, ಬಿ.ಆರ್.ಸಿ ಆರ್ ಸಿ ಮೇತ್ರಿ ಮುಖ್ಯ ಗುರುಗಳು ಯು ಎಚ್ ಚವ್ಹಾಣ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷ ಶ್ರೇಣಿಕರಾಜ ಹಳ್ಳಿ ,ಉಪಾಧ್ಯಕ್ಷ ಸುಶ್ಮೀತಾ ಮೇತ್ರಿ, ಸದಸ್ಯ ಪ್ರಶಾಂತ ಗುಂದಗಿ, ರಮೇಶ ರಾಠೋಡ, ಆನಂದ ಕಂಬಾರ, ಸಂತೋಷ ಮೋರೆ, ಮಲ್ಲು ಗುಡ್ಲ ಮತ್ತು ಶಾಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತಿರು.