ಅಫಜಲಪುರ: ತಾಲೂಕಿನ ಕೋಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಕಲಗಾ ಗ್ರಾಮದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಸ್ಥಳ ಮುಲ್ಲಾನ್ ಮಡ್ಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಪಡಶೆಟ್ಟಿ, ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಆರೋಗ್ಯವಾಗಿದ್ದವನೇ ನಿಜವಾದ ಶ್ರೀಮಂತ ಎಂಬ ಮಾತಿನಂತೆ ಎಲ್ಲಾ ಕೂಲಿಕಾರರು ತಮ್ಮ ಕಾಯಿಲೆಗಳನ್ನು ಪರೀಕ್ಷಿಸಿಕೊಂಡು ಹೆಚ್ಚಿನ ತೊಂದರೆಗಳಿದ್ದರೆ ವೈದ್ಯರ ಸಲಹೆ ಪಡೆದುಕೊಂಡು ಆರೋಗ್ಯವಾಗಿ ಸದೃಡರಾಗಬೇಕು. ಉದ್ಯೋಗ ಖಾತ್ರಿ ಯೋಜನೆಯ ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ 170 ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್, ತೂಕ ಪರೀಕ್ಷೆ ಮಾಡಲಾಯಿತು.
ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಅಸ್ಠಗಿ ಸದಸ್ಯರಾದ ನೀಲಕಂಠ ಮೂಲಗೆ, ಲಕ್ಷ್ಮಣ ನಡಗೇರಿ, ಶಿವಕುಮಾರ ಜಮಾದಾರ, ಟಿಎಇ ಲಕ್ಷ್ಮಿ ಜಮಖಂಡಿ, ಐಇಸಿ ತಾಲೂಕು ಸಂಯೋಜಕಿ ಶೋಭಾ ಕಣಮಸ್ಕರ ಸಿಎಚ್ ಓ ಶರಣಬಸಪ್ಪ, ಕೀರ್ತಿ
ಕೆಎಚ್ ಪಿಟಿ ಸಂಸ್ಥೆ ತಾಲೂಕು ಸಂಯೋಜಕ ದಿಲೀಪ ಕುಮಾರ ಸೇರಿದಂತೆ ಅಂಗನವಾಡಿ ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.