ರಾಯಚೂರು – ದೇವದುರ್ಗ ತಾಲೂಕಿನ ಮಸರಕಲ್ ಹಾಗೂ ಸುಂಕೇಶ್ವರಹಾಳ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡಿರುವ ಸಿಸಿ ರಸ್ತೆ ಮತ್ತು ಜಲಜೀವನ ಮಿಷನ್ ಯೋಜನೆಗಳ ಕಾಮಗಾರಿಗಳಿಗೆ ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶೇಖ್ ತನ್ವೀರ್ ಆಸಿಫ್ ರವರು ಇಂದು ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಸರಕಲ್ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಿಸಿ ರಸ್ತೆ ಹಾಗೂ ಜಲಜೀವನ ಮಿಷನ್ ಯೋಜನೆಯಲ್ಲಿ ಗ್ರಾಮದ ಪ್ರತಿಯೊಂದು ಮನೆ ಮನೆಗೂ ನಳದ ಸಂಪರ್ಕ ನೀರಿನ ವ್ಯವಸ್ಥೆ ಗುಣ ಮಟ್ಟದ ಪೈಪುಗಳನ್ನು ಅಳವಡಿಸಲು ತಿಳಿಸಿದರು. ಸದರಿ ಕಾಮಗಾರಿಗಳಿಗೆ ಸಂಬಂದಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಪರಿಶೀಲಿಸಿದರು.
ತದನಂತರ ಸುಂಕೇಶ್ವರ ಗ್ರಾಪಂಯಲ್ಲಿ ನೂತನ ಗ್ರಾಪಂ ಕಟ್ಟಡ, ಚರಂಡಿ ನಿರ್ಮಾಣ ಹಾಗೂ ಜಲಜೀವನ ಮೀಷನ್ ಯೋಜನೆ ಸಂಬಂದಿಸಿದ ಕಾಮಗಾರಿಗಳನ್ನು ವಿಕ್ಷೀಸಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು (ಉಖಾಯೋ), ಗ್ರಾಕುನೀರು (ಅಭಿಯಂತರರು) ತಾಂತ್ರಿಕ ಸಂಯೋಜಕರು ಹಾಗೂ ಗ್ರಾಪಂಯ ಸಿಬ್ಬಂದಿಗಳು ಹಾಜರಿದ್ದರು.