ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಪ್ರಯುಕ್ತ ಪಿ ಎಸ್ ಐ ಡಾಕೇಶ್ ಯು ಅವರ ನೇತೃತ್ವದಲ್ಲಿ ಹೋಳಿ ಹಬ್ಬ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಈ ವೇಳೆ ಹಿರಿಯ ಮುಖಂಡ ಗುರುಬಸಪ್ಪ ಸಜ್ಜನ್ ಮಾತನಾಡಿ ಎಲ್ಲರೂ ಹಬ್ಬವನ್ನು ಶಾಂತಿ ರೀತಿಯಿಂದ ಆಚರಿಸಬೇಕು. ನಮ್ಮ ಸಂಸ್ಕೃತಿಯಲ್ಲಿ ಹಬ್ಬ ಹರಿ ದಿನಗಳಿಗೆ ಬಹಳ ಮಹತ್ವವಿದೆ. ಸರ್ವಧರ್ಮ ಸಮನ್ವಯತೆಯಿಂದ ಎಲ್ಲರೂ ಹೋಳಿ ಹಬ್ಬವನ್ನು ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾಜಿ, ನ್ಯಾಮತ್ ಖಾದ್ರಿ, ಸೈಯದ್ ಸಾಬ್, ತಸ್ಲೀಮ್ ಮುಲ್ಲಾ, ದುರ್ಗಪ್ಪ ಕಟ್ಟಿಮನಿ, ಹೇಮಂತ್, ಗುರುಬಸಪ್ಪ ಸಜ್ಜನ್, ಸಂಗಪ್ಪ ಹಿರೇಮನಿ, ಶರಣಪ್ಪ ಕಟ್ಟಿಮನಿ, ಸಣ್ಣ ಸಿದ್ದಯ್ಯ, ವೆಂಕಟೇಶ್ ಹಿರೇಮನಿ, ನಾಗರಾಜ್ ತಳವಾರ, ವೀರೇಶ್ ಉಪ್ಪಾರ, ಮಹಾಂತೇಶ ಆಕ್ಷತಿ, ಜವಾರಿ ಲಾಲ್ ಶೇಟ್ ವರ್ಮ ಪೊಲೀಸ್ ಸಿಬ್ಬಂದಿ ವರ್ಗದವರು ಸೇರಿದಂತೆ ಮುಂತಾದವರು ಇದ್ದರು.