ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ ಪುಟ್ಟನ ದಸರಾ ಪುಸ್ತಕ ಬಿಡುಗಡೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಬಿದರಕುಂದಿ ಶಿಕ್ಷಕರ,ಮತ್ತು ಸಾಹಿತಿ ಶ್ರೀಮತಿ ಸುಮಲತಾ ಗಡಿಯಪ್ಪನವರ ಇವರ ಎರಡನೇ ಕೃತಿಯಾದ “ಪುಟ್ಟನ ದಸರಾ” ಮಕ್ಕಳ ಕವನ ಸಂಕಲನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮೈಸೂರು ದಸರಾ ಮಹೋತ್ಸವ ಸಮಿತಿ ಮೈಸೂರಿನ ವತಿಯಿಂದ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪುಸ್ತಕ ಮೇಳದಲ್ಲಿ ಬಿಡುಗಡೆಯಾಗಲು ಆಯ್ಕೆಯಾಗಿದೆ. ಈ ಪುಸ್ತಕ ಸೆಪ್ಟೆಂಬರ್ 24 .2025 ರಂದು ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳದಲ್ಲಿ ನಾಡಿನ ಖ್ಯಾತ ಸಾಹಿತಿಗಳಾದ ಶ್ರೀ ಕೃಷ್ಣಮೂರ್ತಿ ಹನೂರು ಅವರಿಂದ ಮತ್ತು ಅನೇಕ ಖ್ಯಾತ ನಾಮ ಸಾಹಿತಿಗಳು ಮತ್ತು ಅತಿಥಿ ಮಹೋದಯರ ಸಮ್ಮುಖದಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕವು ಬಿಡುಗಡೆಗೂ ಮುನ್ನ ಕಂಚ್ಯಾಣಿ ಶರಣಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ. ಆದ್ದರಿಂದ ಸುಮಲತಾ ರವರಿಗೆ ಮುದ್ದೇಬಿಹಾಳ ತಾಲೂಕಿನ ಸಾಹಿತ್ಯ ಪರಿಷತ್ತಿನ ವತಿಯಿಂದ ಮತ್ತು ಎಲ್ಲಾ ಶಿಕ್ಷಕ ವೃಂದದವರು ಶುಭಾಶಯ ತಿಳಿಸಿದ್ದಾರೆ.