ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ
ವಿಜಯಪುರ : ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ ಎರಡನೆ ದಿನಕ್ಕೆ ಕಾಲಿಟ್ಟಿತು. ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಬೆಂಬಲಕ್ಕೆ ನೀಡಿದರು. ಅಖಿಲ ಕರ್ನಾಟಕ ಮಂಟಪ, ಲೈಟ್ ಅ್ಯಂಡ್ ಸೌಂಡ್, ಸಂಗೀತ, ಡೆಕಾರೇಷನ್ , ಕ್ಯಾಟ್ರಿಂಗ್, ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಅಧ್ಯಕ್ಷರಾದ ಜಹೂರಹಮ್ಮದ ಇಂಡೀಕರ ರವರು ಮಾತನಾಡಿ ಈ ಹೋರಾಟ ಪಕ್ಷಾತೀತವಾಗಿ, ಪ್ರಾಮಾಣಿಕವಾಗಿ ಮುನ್ನಡೆಯಬೇಕು. ಜಿಲ್ಲೆಯ ಬಡ ಜನರ ಆರೋಗ್ಯ ಮತ್ತು ಶಿಕ್ಷಣದ ಹಿತಾಸಕ್ತಿ ಅಡಗಿರುವ ಈ ಹೋರಾಟಕ್ಕೆ ನಮ್ಮ ಬೆಂಬಲ ಯಾವತ್ತು ಇರುತ್ತದೆ. ಜಿಲ್ಲೆಯ ಜನತೆ ಕೂಡಾ ಒಗ್ಗಟ್ಟಾಗಿ ಈ ಹೋರಟ ಬೆಂಬಲಿಸುವಂತೆ ಮನವಿ ಮಾಡಿದರು.
ಸುರಭಿ ಮಂಟಪದ ಶಬ್ಬೀರ ಪಿರಜಾದೆ ಹಾಗು ಮಾಲಿಕರಾದ ಮತ್ತು ಕಾರ್ಮಿಕ ಕ್ಷೇಮಾಭಿವೃದ್ದಿ ಸಂಘದ ಸದಸ್ಯರುಗಳಾದ ಸೋಯಲ್ ಇಂಡೀಕರ, ಅಜಿಜ ದಾದಾ ಡಾಲಾಯತ, ಅಪ್ಪಣ್ಣ, ಮಹಾರಾಜ ಮತ್ತೀತರರು ಭಾಗವಹಿಸಿದ್ದರು. ನಿವೃತ್ತ ದಲಿತ ನೌಕರರ ಸಂಘದ ಪದಾಧಿಕಾರಿಗಳಾದ ಅನಿಲ ಉಕ್ಕಲಿ, ಗೋವರ್ಧನ ಚಲವಾದಿ, ಶಂಖರ ವಡವಡಗಿ, ಶರಣು ಸಿಂದಗಿ,ಚಿದಾನಂದ ಗಡಿಗೇರ ಸಂಗಪ್ಪ ಸೊಲಾಪುರ, ಸುಧಾಕರ ಕನಮಡಿ ಮತ್ತೀತರರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದರು. ಫೆಡಿನಾ ಸಂಸ್ಥೆಯ ಪ್ರಭುಗೌಡ ಪಾಟೀಲ, ನಕುಶಾ ಹೊಸಮನಿ, ಸಂಗೀತಾ ಪುಜಾರಿ ಯವರು ಕೂಡಾ ಹೋರಾಟವನ್ನು ಬೆಂಬಲಿಸಿದರು. ಸಿದ್ದನಗೌಡ ಪಾಟೀಲ, ಭೊಗೀಶ ಸೊಲಾಪುರ, ಅಕ್ರಮ ಮಾಶಾಳಕರ, ಲಕ್ಮಣ ಹಂದ್ರಾಳ, ವಾಸುದೇವ ಸಿರೋಳ, ದಸ್ತಗೀರ ಉಕ್ಕಲಿ, ಲಕ್ಷ್ಮಣ ಕಂಬಾಗಿ,ಗಿರೀಶ, ಕಲಘಟಗಿ, ಶ್ರೀಕಾಂತ ರಾಠೋಡ, ಮಹಾದೇವ ದಳವಾಯಿ, ಶೃತಿ ನಿಡೋಣಿ, ಕವಿತಾ ಪವಾರ, ಕಿರಣ ಮೇಲಿನಕೇರಿ, ಮಲ್ಲಿಕಾರ್ಜುನ ಬಟಗಿ, ರಾಜೇಶ್ವರಿ ಮಠಪತಿ, ಶಕುಂತಲಾ ಎಮ್. ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಸುಶಿಲಾ ಚವ್ಹಾಣ, ಸುರೇಶ ಬಿಜಾಪುರ, ಗೀತಾ ವಗ್ಗೇನವರ, ಅನೀಲ ಉಕ್ಕಲಿ, ಗೋವರ್ಧನ, ಚಿದಾನಂದ ಗಡಗಿ ಶರಣಪ್ಪ ಸಿಂದಗಿ, ಎಸ್. ವೈ ವಡವಡಗು, ಜಗದೇವ ಸೂರ್ಯವಂಶಿ, ಶಿವಾನಂದರಡ್ಡಿ ಸುತಗುಂಡಿ, ಸುರೇಶ ನಿನ್ನೇ, ಸಿ.ಬಿ ಪಾಟೀಲ, ವಿದ್ಯಾವತಿ ಅಂಕಲಗಿ,ಅಚುತ್ ಅವಜಿ, ಕೆ.ಕೆ ವಾಘಮೋರೆ, ಮಲ್ಲಿಕಾರ್ಜುನ, ಹೆಚ್.ಟಿ.ಭರತಕುಮಾರ ಯವರು ಭಾಗವಹಿಸಿದ್ದರು.